ಕಾಸರಗೋಡು: ಕಾರು-ಟ್ಯಾ೦ಕರ್ ಲಾರಿ ಡಿಕ್ಕಿ ಹೊಡೆದು ಸಶಸ್ತ್ರ ಮೀಸಲು ಪಡೆಯ ಎ.ಎಸ್. ಐ ಮೃತಪಟ್ಟ ಘಟನೆ ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಪೆರಿಯದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಪದ್ಮನಾಭ (೪೦) ಎಂದು ಗುರುತಿಸಲಾಗಿದೆ.
ಪದ್ಮನಾಭನ್ ಚಲಾಯಿಸುತ್ತಿದ್ದ ಕಾರಿಗೆ ಮುಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಅಪಘಾತದ ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್, ಡಿವೈ ಎಸ್ಪಿ ಎಂ.ವಿ ಸುಕುಮಾರನ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದ್ದಾರೆ.