ಕಾಸರಗೋಡು: ಗೃಹಿಣಿಯನ್ನು ಬೆದರಿಸಿ ಮೂರು ಲಕ್ಷ ರೂ. ದರೋಡೆಗೆತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಇಬ್ಬರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉದುಮ ಮುಳ್ಳಚ್ಚೇರಿಯ ಉಣ್ಣಿ ಯಾನೆ ಜನಿಲ್ (31), ಚೆ೦ಬರಿಕದ ಅಶ್ರಫ್ (35) ಎಂದು ಗುರುತಿಸಲಾಗಿದೆ.
ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಗ್ರಹಿಣಿಗೆ ಬೆದರಿಸಿ ಹಣ ದರೋಡೆಗೆ ಯತ್ನಿಸಿದ್ದರು.
ಈ ಕುರಿತು ಗ್ರಹಿಣಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದರು. ಈ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪೈಕಿ ಅಶ್ರಫ್ ಪೆಟ್ರೋಲ್ ಪಂಪ್ ನೌಕರನ ಮೇಲೆ ಹಲ್ಲೆ ನಡೆಸಿ ಹಣ ದರೋಡೆಗೈದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.