ಕಾರ್ಕಳ: ಸ್ವಯಂ ಪ್ರೇರಿತವಾಗಿ ಚಿತೆಗೆ ಅಗ್ನಿಸ್ವರ್ಶಗೈದು ದಂಪತಿಗಳು ಸಜೀವ ಸಾವಿಗೀಡಾದ ಘಟನೆ ಹಿರ್ಗಾನದ ಬೆಗೂರು ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೀತಾರಾಮ ಆಚಾರಿ (55) ಸುನಂದಾ(44) ದಂಪತಿಗಳು ಏಕಕಾಲದಲ್ಲಿ ಬದುಕಿಗೆ ಅಂತ್ಯ ಹೇಳಿದವರು. ಸುಮಾರು 150 ಅಡಿ ದೂರದಲ್ಲಿ ಒಂದೆರಡು ಮನೆಗಳಿದ್ದು ಅಲ್ಲಿನ ಬಾವಿಯ ನೀರನ್ನೇ ಈ ದಂಪತಿಗಳು ಕುಡಿಯಲು ಹಾಗೂ ದಿನಬಳಕೆಗಾಗಿ ಉಪಯೋಗಿಸುತ್ತಾ ಇದ್ದರು. ಪ್ರತಿದಿನ ಬಾವಿಯ ನೀರು ಕೊಂಡು ಹೋಗುತ್ತಿದ್ದ ಪರಿಪಾಠ ಬೆಳೆಸಿಕೊಂಡಿದ್ದ ದಂಪತಿಗಳು ಗುರುವಾರ ಬೆಳಿಗ್ಗೆ ನೀರು ಕೊಂಡಹೋದವರು ಮತ್ತೇ ಹಿಂತಿರುಗಿಯೇ ಇಲ್ಲ. ಇದರಿಂದ ಅನುಮಾನಗೊಂಡು ನೆರೆಕರೆಯವರು ಶನಿವಾರ ಬೆಳಿಗ್ಗೆ ಮನೆ ಕಡೆಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.