ಕಾಸರಗೋಡು: ಗದ್ದೆಗಿಳಿದು ನಾಟಿ ಮಾಡುವ ಮೂಲಕ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಕೃಷಿಯ ಬಗ್ಗೆ ಒಲವು ಬಗ್ಗೆ ಮನವರಿಕೆ ಮಾಡಿದರು.
ನವ ಕೇರಳ ಮಿಷನ್ ನ ಯೋಜನೆಯಡಿ ಭತ್ತ ಕೃಷಿಗೆ ಉತ್ತೇಜನ ನೀಡುವ ಬಗ್ಗೆ ಕಾಞ೦ಗಾಡ್ ನಗರಸಭೆ ವತಿಯಿಂದ ಕಾರಾಟ್ ಬಯಲಿನಲ್ಲಿ ಸಚಿವರು ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.
ಹಲವು ಕಾರಣಗಳಿಂದ ಕೃಷಿ ನಾಶವಾದಾಗ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಕೃಷಿ ಉತ್ಪನ್ನಗಳ ಉತ್ಪಾದನೆ , ಸಂಗ್ರಹ, ಮಾರುಕಟ್ಟೆ ವ್ಯವಸ್ಥೆಗೆ ಕೇಂದ್ರ – ರಾಜ್ಯ ಸರಕಾರಗಳ ಸಹಾಯ ಖಾತರಿ ಪಡಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕೃಷಿಗೆ ಉತ್ತೇಜನ ನೀಡಲು ಸರಕಾರ ಎಲ್ಲಾ ರೀತಿಯಲ್ಲಿ ಬದ್ಧವಾಗಿದೆ. ಕೃಷಿಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಖಚಿತ ಪಡಿಸಬೇಕು ಮತ್ತು ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸಲು ಫಲಫ್ರದವಾಗಿ ತೊಡಗಿಸಿಕೊಂಡಲ್ಲಿ ಕೇರಳದ ಕೃಷಿ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯ ಎಂದರು.
ನಗರಸಭಾ ಅಧ್ಯಕ್ಷ ವಿ .ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲ್. ಝುಲೈಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರನ್, ರಾಧಾಕೃಷ್ಣನ್, ಎಂ.ಪಿ ಜಾಫರ್, ಟಿ .ಪಿ ಭಾಗೀರಥಿ, ಮುಹಮ್ಮದ್, ಎಂ ,. ಬಾಲರಾಜ್, ಕೆ . ಮುಹಮ್ಮದ್ ಕು೦ಞ ಮೊದಲಾದವರು ಮಾತನಾಡಿದರು.