ಬಂಟ್ವಾಳ: ಸೌಹಾರ್ದ ಫ್ರೆಂಡ್ಸ್ ಕಂಬಳಬೆಟ್ಟು ಇದರ ದಶಮಾನೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನಡೆದ ಆಹ್ವಾನಿತ ತಂಡಗಳ ಪ್ರೋ ಮಾದರಿಯ ಡೇ ಮತ್ತು ನೈಟ್ ಮ್ಯಾಚ್ ಕಬಡ್ಡಿ ಪಂದ್ಯಾಟದಲ್ಲಿ ಮೂಡಬಿದಿರೆ ಆಳ್ವಾಸ್ ತಂಡ ಪ್ರಥಮ ಸ್ಥಾನ ಪಡೆದರೆ ವಿಟ್ಲದ ಮೇಗಿನಪೇಟೆ ರೆಡ್ ಟ್ಯಾಗ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಫ್ರೆಂಡ್ಸ್ ಕಡಬ ಮೂರನೇ ಹಾಗೂ ಚಿಕ್ಕಮಗಳೂರಿನ ಕೊಪ್ಪ ತಂಡ ನಾಲ್ಕನೇ ಪ್ರಶಸ್ತಿ ಪಡೆದುಕೊಂಡಿದೆ.
ಆಳ್ವಾಸ್ ತಂಡದ ಭರತ್ ಆಲ್ ರೌಂಡರ್, ರೆಡ್ ಟ್ಯಾಗ್ ತಂಡದ ಸುಶಾಂತ್ ಶೆಟ್ಟಿ ಉತ್ತಮ ದಾಳಿಗಾರ ಹಾಗೂ ಆಳ್ವಾಸ್ ತಂಡದ ಜಸ್ವಾಂತ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾ ಪಟುಗಳಾದ ಗಾಯತ್ರಿ, ಭರತ್, ರಶೀದ್ ಬನಾರಿ, ಅಬ್ದುಲ್ ರಹಿಮಾನ್, ಹಿರಿಯ ಕಬಡ್ಡಿ ಆಟಗಾರರಾದ ಜಬ್ಬಾರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಮಲಯಾಳಂ ಚಲನಚಿತ್ರ ನಟಿ ದಿಶಾ ದಿನಕರ್ ಪಂದ್ಯಾಟವನ್ನು ಉದ್ಘಾಟಿಸಿದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ ಮಾನ್ ಬಂಟ್ವಾಳ, ಬಂಟ್ವಾಳ ಪುರಸಭೆ ಸದಸ್ಯ ಇಕ್ಬಾಲ್ ಗೂಡಿನಬಳಿ, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಯಾನಂದ ಅಬೀರಿ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಅಬೂಬಕ್ಕರ್ ಒಕ್ಕೆತ್ತೂರು, ಇಸ್ಮಾಯಿಲ್ ಪೊಳ್ಯ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಸೋಮಶೇಖರ್ ಶೆಟ್ಟಿ ಅಳಕೆಮಜಲು, ಹಾಜಿ ಮೊಹಿದ್ದೀನ್ ಶಾಫಿ, ರಶೀದ್ ವಿಟ್ಲ, ಅಬ್ದುಲ್ ರಹಿಮಾನ್ ಅದ್ರು, ಶುಶಾಂತ್ ಶೆಟ್ಟಿ ಮೂಡೈಮಾರ್, ನಾಸೀರ್ ಕೋಲ್ಪೆ, ಜಯಶೀಲ ಶೆಟ್ಟಿ ಮೂಡೈಮಾರ್, ಹಮೀದ್ ಮೌಲ ಕಬಕ, ಅಬ್ದುಲ್ ರಹಿಮಾನ್ ಕುರುಂಬಳ, ಹನೀಫ್ ಹಾಜಿ ಗೋಳ್ತಮಜಲು, ರಮಾನಾಥ ವಿಟ್ಲ, ಶಾಹುಲ್ ಹಮೀದ್ ನೆಕ್ಕರೆ, ಈಶ್ವರ ಭಟ್ ಪಡ್ನೂರು, ಪತ್ರಕರ್ತ ಲತೀಫ್ ನೇರಳಕಟ್ಟೆ, ಐ.ಸಿ ಕೈಲಾಸ್, ಶಮ್ಮೂನ್ ಪರ್ಲಡ್ಕ, ದಯಾನಂದ ಉಜಿರೆಮಾರ್, ಜಾಬೀರ್ ಅರಿಯಡ್ಕ, ಶರೀಫ್ ಬೀಟಿಗೆ, ತ್ಯಾಗರಾಜ್ ವಿಟ್ಲ, ಉಬೈದ್ ಮಂಗಳಪದವು, ಕಲಂದರ್ ಪರ್ತಿಪಾಡಿ, ಉಬೈದುಲ್ಲಾ ವಿಟ್ಲ ಬಝಾರ್, ನಝೀರ್ ಕಂಬಳಬೆಟ್ಟು, ಅಬ್ದುಲ್ ರಝಾಕ್ ಮೋನು, ರಘು ಕೆಲಿಂಜ, ಶಂಶುದ್ದೀನ್ ಕಂಬಳಬೆಟ್ಟು, ಶರೀಫ್ ಇಂಡಿಯನ್ ಆಟೋ ಲಿಂಕ್ಸ್, ಯೂಸುಫ್ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.
ಶಾಕೀರ್ ಅಳಕೆ ಮಜಲು ಸ್ವಾಗತಿಸಿದರು. ಹಮೀದ್ ಕಂಬಳಬೆಟ್ಟು ವಂದಿಸಿದರು. ನೌಫಲ್ ಕುಡ್ತಮುಗೇರು ಹಾಗೂ ಹಮೀದ್ ಗೋಳ್ತಮಜಲು ನಿರೂಪಿಸಿದರು.