ಬೆಳ್ತಂಗಡಿ: ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಿಡ್ಲೆ ನಿವಾಸಿ ರಿಕ್ಷಾ ಚಾಲಕ ಉಮೇಶ್ (26) ಎಂಬವನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲೆಯಿಂದ ಬರುತ್ತಿದ್ದ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದೆಂದು ತಿಳಿದು ಬಂದಿದ್ದು, ಬಾಲಕಿ ಬೊಬ್ಬೆ ಹೊಡೆದ ಕಾರಣ ಈತ ರಿಕ್ಷಾ ಬಿಟ್ಟು ಪರಾರಿಯಾಗಿದ್ದ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ್ದು ಫೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.