ಕೊಲ್ಲೂರು: ಶಬರಿಮಲೆ ಯಾತ್ರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆಯನ್ನು ಮೂಕಾಂಬಿಕಾ ದೇವಾಲಯದಿಂದ ಆರಂಭಿಸಿರುವ ಭಕ್ತನೊಬ್ಬನನ್ನು ನಾಯಿಯೊಂದು ಹಿಂಬಾಲಿಸಿಕೊಂಡು ಬಂದಿದೆ.
ನವೀನ್ ಎಂಬ ಅಯ್ಯಪ್ಪ ಭಕ್ತ ಕೊಲ್ಲೂರಿನಿಂದ ಉಡುಪಿ ಮಾರ್ಗವಾಗಿ ಶಬರಿಮಲೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅವರ ಹಿಂದೆ ನಾಯಿಯೊಂದು 600 ಕಿಲೋಮೀಟರ್ ಹಿಂಬಾಲಿಸಿಕೊಂಡು ಬಂದಿದೆ. ಕೇರಳದ ಕೋಳಿಕೋಡ್ ಮೂಲದವರಾಗಿರುವ ಇವರು ಡಿಸೆಂಬರ್ 7ರಂದು ಯಾತ್ರೆ ಆರಂಭಿಸಿದ್ದಾರೆ. ನವೀನ್ ಮೊದಲು ಇದನ್ನ ನೋಡಿದ್ದು ಡಿಸೆಂಬರ್ 8ರಂದು. ಆರಂಭದಲ್ಲಿ ಹಲವು ಬೀದಿ ನಾಯಿಗಳಂತೆ ಇದು ಹಿಂಬಾಲಿಸುತ್ತಿರಬೇಕು ಎಂದುಕೊಂಡು ಅದನ್ನ ಓಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ಅನೇಕ ಸಲ ಪ್ರಯತ್ನಿಸಿದರೂ ಅದು ಹೋಗಿಲ್ಲ.
600 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಈಗಾಗಲೇ ಅವರು 17 ದಿನಗಳ ಕಾಲ ಕಾಲ್ನಡಿಗೆ ಮುಗಿಸಿದ್ದು, ಡಿಸೆಂಬರ್ 23ರಂದು ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಈ ಶ್ವಾನ ಮತ್ತೆ ಇವರನ್ನ ಹಿಂಬಾಲಿಸಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಯಾತ್ರೆಗೆ ಉದ್ದಕ್ಕೂ ಸಾತ್ ನೀಡಿರುವ ಈ ನಾಯಿಯನ್ನು ಮನೆಗೆ ಕರೆದುಕೊಂಡು ಅದಕ್ಕೆ ಮಾಲು ಎಂದು ಹೆಸರಿಟ್ಟು ತನ್ ಮನೆ ನಾಯಿಯನ್ನಾಗಿ ಮಾಡಿದ್ದಾರೆ.