ಮೂಡುಬಿದಿರೆ: ಮೂಡುಬಿದಿರೆ ಪೇಟೆಯಲ್ಲಿರುವ ಟೈಲರ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕದಿಂದಾಗಿ ಅಂಗಡಿ, ಅಲ್ಲಿರುವ ಸೊತ್ತುಗಳು ಸಂಪೂರ್ಣ ಭಸ್ಮವಾಗಿದೆ.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಬಳಿಯಲ್ಲಿ ಕಳೆದ 30 ವರ್ಷಗಳಿಂದಿರುವ ನಿರ್ಮಲಾ ಟೈಲರ್ಸ್ ಬೆಂಕಿಗಾಹುತಿಯಾದ ಟೈಲರ್ ಅಂಗಡಿಯಾಗಿದೆ. ಶುಕ್ರವಾರ ನಸುಕಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದಾಗಿ ಅಂಗಡಿಯಲ್ಲಿರುವ ಏಳು ಟೈಲರಿಂಗ್ ಮೆಶೀನ್, ಗ್ರಾಹಕರ ಬಟ್ಟೆ, ಟೈಲರಿಂಗ್ ಪರಿಕರಗಳು ಸಂಪೂರ್ಣ ಭಸ್ಮವಾಗಿದೆ.