ಕಾಸರಗೋಡು: ಹೊಸದುರ್ಗದ ಮಾದೋತ್ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ವಿಗ್ರಹಕ್ಕೆ ಅಳವಡಿಸಲಾಗಿದ್ದ ಚಿನ್ನಾಭರಣ ಕಳವು ಗೈದ ಘಟನೆ ನಡೆದಿದೆ.
ದೇವಸ್ಥಾನದ ಸುತ್ತುಗೋಪುರ ಮೂಲಕ ಒಳಪ್ರವೇಶಿಸಿ ಹಂಚು ತೆಗೆದು ಗರ್ಭಗುಡಿಗೆ ನುಗ್ಗಿದ ಕಳ್ಳರು ವಿಗ್ರಹದ ಮೇಲಿದ್ದ ಎರಡು ಪವನ್ ಚಿನ್ನದ ಸರ ಮತ್ತು ಮೂರು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿದ್ದಾರೆ.
ಘಟನೆ ಬಗ್ಗೆ ಸ್ಥಳಕ್ಕಾಗಮಿಸಿರುವ ಹೊಸ ದುರ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ.