ಕಾಸರಗೋಡು: ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿ ಕೊಳ್ಳಲಾಯಿತು. ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಬಲಿ ಪೂಜೆ ನೆರವೇರಿತು.
ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ಬಲಿಪೂಜೆಯನ್ನು ದೈವಿಕ್ ಅಮೃತ್ ಕುಟುಂಬ ಹಿತ ಸಮಿತಿ ನಿರ್ದೇಶಕ ಹಾಗೂ ಮೂಡುಬೆಳ್ಳೆ ಕಾಪುಚಿನ್ ಧರ್ಮಗುರು ವಂದನೀಯ ವಲೇರಿಯನ್ ಡಿ ಸಿಲ್ವಾ ನೆರವೇರಿಸಿದರು. ಇದಕ್ಕೆ ಮೊದಲು ನಡೆದ ವಿಶೇಷ ಪ್ರಾರ್ಥನೆಗೆ ಧರ್ಮಗುರು ವಂದನೀಯ ವಿಕ್ಟರ್ ಡಿ ಸೋಜ ನೇತೃತ್ವ ನೀಡಿದರು.
ಪುಣ್ಯ ಕ್ಷೇತ್ರವಾದ ಬೇಳ ಸೇರಿದಂತೆ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲೂ ಪ್ರಾರ್ಥನೆ, ಬಲಿ ಪೂಜೆ ನೆರವೇರಿತು.
ವಿವಿಧ ಸಂಘ ಸಂಸ್ಥೆಗಳಿಂದ ಹಲವು ಕಡೆಗಳಲ್ಲಿ ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು.
ಹಲವೆಡೆ ಸುಡುಮದ್ದು ಸಿಡಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು ಹೊಸ ವರ್ಷದ ಸಂಭ್ರಮಾಚರಣೆಯ ಜೊತೆಗೆ ಸಿಹಿ ಕಹಿ ನೆನಪುಗಳನ್ನೆಲ್ಲ ಮರೆತು, ಹೊಸ ಕನಸು ಹೊತ್ತು ನಗರದ ಜನತೆ ಹೊಸ ವರ್ಷವನ್ನು ಹುರುಪಿನೊಂದಿಗೆ ಬರಮಾಡಿಕೊಂಡರು.