ಬೆಳ್ತಂಗಡಿ: ಅಕ್ರಮವಾಗಿ ಗೋವುಗಳ ಚರ್ಮ ಹಾಗೂ ಮಾಂಸವನ್ನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದನ್ನು ಪುದುವೆಟ್ಟು ಜಂಕ್ಷನ್ ಎಂಬಲ್ಲಿ ಸೋಮವಾರ ಬೆಳಿಗ್ಗೆ ಧರ್ಮಸ್ಥಳ ಪೋಲಿಸರು ಪತ್ತೆ ಹಚ್ಚಿ ವಾಹನವನ್ನು ವಶಪಡಿಸಿಕೊಂಡಿದ್ದಾರಲ್ಲದೆ ಇಬ್ಬರನ್ನು ಬಂಧಿಸಿದ್ದಾರೆ.
ಬಜರಂಗ ದಳದ ಕಾರ್ಯಕರ್ತರು ನೀಡಿದ ಸೂಚನೆಯ ಮೇರೆಗೆ ಪೋಲಿಸರು ಬೆಳಿಗ್ಗೆ 9 ಗಂಟೆಯ ವೇಳೆ ಈ ಕಾರ್ಯಾಚರಣೆ ನಡೆಸಿದ್ದರು. ವಾಹನವನ್ನು ಅಡ್ಡಗಟ್ಟಿದ ಪೋಲಿಸರು ಅದರಲ್ಲಿದ್ದ ಸುಮಾರು 100 ದನದ ಹಸಿ ಚರ್ಮವನ್ನು ಮತ್ತು ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಸಾಗಾಟ ಮಾಡುತ್ತಿದ್ದ ಕುಪ್ಪೆಟ್ಟಿಯ ಅಬ್ದುಲ್ ಹಾರಿಸ್ ಹಾಗು ಮಹಮ್ಮದ್ ನಿಜಾಮ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.