News Kannada
Tuesday, November 29 2022

ಕರಾವಳಿ

ಸ್ವಾತಂತ್ರ್ಯ ಸಂರಕ್ಷಣಾ ಪಾದಯಾತ್ರೆ ಮೇಲೆ ಕಲ್ಲು ತೂರಾಟ: ಹಿಂಸಾಚಾರಕ್ಕೆ ತಿರುಗಿದ ಕಾಸರಗೋಡು - 1 min read

Photo Credit :

ಸ್ವಾತಂತ್ರ್ಯ ಸಂರಕ್ಷಣಾ ಪಾದಯಾತ್ರೆ ಮೇಲೆ ಕಲ್ಲು ತೂರಾಟ:  ಹಿಂಸಾಚಾರಕ್ಕೆ ತಿರುಗಿದ ಕಾಸರಗೋಡು

ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿ  ಸೋಮವಾರ ನಡೆಸಿದ ಸ್ವಾತಂತ್ರ್ಯ ಸಂರಕ್ಷಣಾ ಪಾದಯಾತ್ರೆ ಮೇಲೆ ಕಲ್ಲು ತೂರಾಟ ಮತ್ತು ಸಂಚಾರಕ್ಕೆ ತಡೆಯೊಡ್ಡಿದೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದನ್ನು ಪ್ರತಿಭಟಿಸಿ ಬಿಜೆಪಿ ಕರೆ ನೀಡಿರುವ ಬಂದ್  ಕಾಸರಗೋಡಿನಲ್ಲಿ  ಹಿಂಸಾಚಾರಕ್ಕೆ  ತಿರುಗಿದ್ದು , ಪರಿಸ್ಥಿತಿಯನ್ನು ನಿಯಂತ್ರಿಸಲು  ಪೊಲೀಸರು ನಾಲ್ಕು ಸುತ್ತು ಅಶ್ರುವಾಯು ಪ್ರಯೋಗಿಸಿದರು. 

ಪೋಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು, ಹಲವೆಡೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ -ಘರ್ಷಣೆ ನಡೆಯಿತು. ರಸ್ತೆಗಿಳಿದ ವಾಹನಗಳನ್ನು ಬಲವಂತವಾಗಿ ತಡೆದರು.  ತೆರೆದ ಅಂಗಡಿಗಳನ್ನು  ಬಲವಂತವಾಗಿ ಮುಚ್ಚಿಸಿದರು. ಈ ನಡುವೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿದ್ದು,  ಹಲವು ವಾಹನಗಳ ಮೇಲೆ ಕಲ್ಲೆಸೆದು ಹಾನಿಗೊಳಿಲಾಗಿದೆ. ನಗರದಲ್ಲಿರುವ ಸಿಪಿಎಂ ಅಧೀನತೆಯಲ್ಲಿರುವ ಜಿಲ್ಲಾ ಸಹಕಾರಿ ಬ್ಯಾ೦ಕ್ ಮೇಲೆ ಬಂದ್ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದು,  ನಗರದಲ್ಲಿ  ಬಿಗುವಿನ ವಾತಾವರಣ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಲಾಠಿ ಪ್ರಹಾರ ನಡೆಸಿದರು.  ನಿಯಂತ್ರಣಕ್ಕೆ ಬಾರದಿದ್ದಾಗ  ನಾಲ್ಕು ಸುತ್ತು ಅಶ್ರುವಾಯು ಬಳಸಿದರು.

ಖಾಸಗಿ, ಕೆಎಸ್ ಆರ್ ಟಿ ಸಿ  ಬಸ್ಸು ಸಂಚಾರ ಮೊಟಕುಗೊಂಡಿವೆ.  ದ್ವಿಚಕ್ರ ಸೇರಿದಂತೆ ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲಾಗಿದ್ದು, ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿದೆ. ಸರಕಾರಿ  ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದೆ. ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸುವ ಎಲ್ಲಾ ವಾಹನಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ತಡೆದರು. ಬೆಳಿಗ್ಗೆ ಕೆಲವೊಂದು ವಾಹನಗಳು ರಸ್ತೆಗಿಳಿದರೂ ಬಂದ್ ಬೆಂಬಲಿಗರು ತಡೆದರು.

ಬೆಳಿಗ್ಗೆ ರೈಲುಗಳಲ್ಲಿ ಕಾಸರಗೋಡಿಗೆ ತಲುಪಿದ ಪ್ರಯಾಣಿಕರು ವಾಹನ ಸೌಕರ್ಯ ಇಲ್ಲದೆ ಪರದಾಡುವಂತಾಯಿತು. ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.  ಈ ನಡುವೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಹಿನ್ನಲೆಯಲ್ಲಿ  ಬಂಧಿತರಾಗಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಸುರೇಂದ್ರನ್ , ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್,  ವಲ್ಸನ್ ತಿಲ್ಲಂಗೇರಿ ಸೇರಿದಂತೆ 32 ಮಂದಿಯನ್ನು ರಾತ್ರಿ ಬಿಡುಗಡೆಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಸೋಮವಾರ ನಡೆದ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ  ಚಂದೇರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜಾಮೀನು ರಹಿತ ಮೊಕದ್ದಮೆಗಳನ್ನುಇವರ ಮೇಲೆ ಹೂಡಲಾಗಿದೆ. ಚಂದೇರ ಠಾಣಾ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ರವರ ದೂರಿನಂತೆ ಎರಡು ಕೇಸು ದಾಖಲಿಸಲಾಗಿದೆ.
ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ವಿರುದ್ಧ  ಕೇಸು ದಾಖಲಿಸಲಾಗಿದೆ. ಹಿಂಸಾಚಾರದಿಂದ ಹೊಸದುರ್ಗ ಸರ್ಕಲ್ ಇನ್ಸ್ ಪೆಕ್ಟರ್  ಸಿ .ಕೆ ಸುನಿಲ್ ಕುಮಾರ್ , ವೆಳ್ಳರಿ ಕುಂಡು  ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ  12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. 15 ಕ್ಕೂ ಅಧಿಕ ಬಿಜೆಪಿ ಮತ್ತು ಸಿಪಿಎ೦ ಕಾರ್ಯಕರ್ತರಿಗೆ  ಗಾಯಗಳಾಗಿವೆ.

See also  ಪಾಣಾಜೆ: ಮಿಕ್ಸಿ ಮಾರಾಟದ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು