ಕಾಸರಗೋಡು: ಮರದ ಮಿಲ್ ಅಗ್ನಿಗಾಯುತಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ಕೈಕಂಬದಲ್ಲಿರುವ ಅಬೂಬಕ್ಕರ್ ಹಾಜಿ ಎಂಬವರ ಮಾಲಕತ್ವದಲ್ಲಿರುವ ಬೋಂಬೆ ಟಿಂಬರ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಮರದ ಮಿಲ್ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಹಾಗು ಸ್ಥಳೀಯರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಸುಮಾರು 10ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಈ ಮಿಲ್ ನ ಹಿಂಭಾಗದ ಸಮೀಪದಲ್ಲೇ ಕ್ಯಾಂಟೀನೊಂದು ಕಾರ್ಯಾಚರಿಸುತಿದ್ದು, ಇಲ್ಲಿಂದ ಬೆಂಕಿಯ ಕಿಡಿ ಹಾರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.