ಕಾಸರಗೋಡು: ಕಾರು ಮತ್ತು ಕಂಟೈನರ್ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳದಲ್ಲಿ ನಡೆದಿದೆ.
ಮೃತಪಟ್ಟವರನ್ನು ತ್ರಿಶ್ಯೂರು ಚೇಲಕ್ಕರದ ರಾಮ್ ನಾರಾಯಣನ್ ( 52), ಪತ್ನಿ ವತ್ಸಲ (48), ರಂಜಿತಾ (24) , ಮಕ್ಕಳಾದ ರಂಜಿತ್ (20) ಮತ್ತು ನಿತಿನ್ ( 24) ಎಂದು ಗುರುತಿಸಲಾಗಿದೆ. ಉಪ್ಪಳ ನಯಾ ಬಜಾರ್ ನಲ್ಲಿ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದೆ. ತ್ರಿಶೂರಿನಿಂದ ಮಂಗಳೂರು ಕಡೆ ಸಾಗುತಿದ್ದ ಕಾರು ಹಾಗು ಎದುರಿನಿಂದ ಆಗಮಿಸಿದ ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಮೃತದೇಹಗಳು ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿರಿಸಲಾಗಿದೆ. ಅಪಘಾತದಿಂದ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬಂದಿಗಳು ಮತ್ತು ಸ್ಥಳೀಯರು ಹೊರ ತೆಗೆದು ಆಸ್ಪತ್ರೆಗೆ ತಲುಪಿಸಿದರೂ ಮೃತಪಟ್ಟಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ತ್ರಿಶ್ಯೂರಿನಲ್ಲಿರುವ ಸಂಬಂಧಿಕರಿಗೆ ಅಪಘಾತದ ಮಾಹಿತಿ ನೀಡಲಾಗಿದ್ದು, ಮಧ್ಯಾಹ್ನದ ವೇಳೆಗೆ ಕಾಸರಗೋಡಿಗೆ ತಲುಪುವ ಸಾಧ್ಯತೆ ಇದೆ. ಮರೋನೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಬಿಟ್ಟುಕೊಡಲಿದೆ.