ವರ್ಷಗಳು ಬದಲಾದ ಹಾಗೆ ಕ್ಯಾಲೆಂಡರ್ ಗಳು ಬದಲಾಗುತ್ತಾ ಇರುತ್ತದೆ. ಸಾಮಾನ್ಯ ಕ್ಯಾಲೆಂಡರ್ ಒಂದು ಪುಟದಲ್ಲಿ ಒಂದು ತಿಂಗಳ ವಿವರಗಳು ಇರುತ್ತದೆ. ಅದೇ ಕ್ಯಾಲೆಂಡರ್ ಸ್ವಲ್ಪ ಬದಲಾವಣೆಯನ್ನು ಮಾಡಿದರೆ ಒಂದು ಪುಟದಲ್ಲಿ ಒಂದು ವರ್ಷದ ಕ್ಯಾಲೆಂಡರ್ ಮಾಡಬಹುದು. ಅದನ್ನು ಇನ್ನೂ ಚಿಕ್ಕದಾಗಿ ಮಾಡಿದರೆ ಒಂದು ಸಂಖ್ಯೆಯಲ್ಲಿ ಒಂದು ತಿಂಗಳ ಕ್ಯಾಲೆಂಡರ್ ಮಾಡಬಹುದು.
ಕ್ಯಾಲೆಂಡರ್ ಸಾಮಾನ್ಯವಾಗಿ ಯಾವ ತಾರೀಕು, ಯಾವ ದಿನ ಆಗುತ್ತದೆ ಎಂದು ತಿಳಿಯಲು, ಒಂದು ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಂಡರೆ ಒಂದು ತಿಂಗಳ ಕ್ಯಾಲೆಂಡರ್ ನೀವೇ ಮಾಡಬಹುದು. ಮಾಡುವ ವಿಧಾನ ಕೋಷ್ಟಕದಲ್ಲಿದೆ ಮಾಡಿ ನೋಡಿ. 2017 ಜನವರಿ ತಿಂಗಳು ಜನವರಿಯ ಸಂಖ್ಯೆ 6, ತಾರೀಕು 3ಕ್ಕೆ ತಿಂಗಳ ಸಂಖ್ಯೆ 6ನ್ನು ಕೂಡಿಸಿ ಆಗ 9, ಅದನ್ನು 7ರಿಂದ ಬಾಗಿಸಿ ಉಳಿದ ಶೇಷ=2 ವಾರದ ಸಂಖ್ಯೆ 2=ಮಂಗಳವಾರ2016ರಿಂದ 2025 ವರೆಗೆ ಅಂದರೆ ಹತ್ತು ವರ್ಷದ ಪುಟ್ಟ ಕ್ಯಾಲೆಂಡರ್.