ಬೆಳ್ತಂಗಡಿ: ಎಂಡೋಸಲ್ಫಾನ್ ಸಮಸ್ಯೆಗೆ ನೊಂದು ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪ ಆಲಡ್ಕ ಎಂಬಲ್ಲಿ ಜ.5ರಂದು ಬೆಳಿಗ್ಗೆ ನಡೆದಿದೆ.
ಎಂಡೋಸಲ್ಫಾನ್ ನಿಂದ ತೀವ್ರ ನೊಂದಿರುವ ಕುಟುಂಬದಲ್ಲಿ ಸದಾನಂದ ಎಂಬವರು ಎಂಡೋಸಲ್ಫಾನ್ ಪೀಡಿತನಾಗಿದ್ದು, ಬಾಬುಗೌಡ(ತಂದೆ), ಗಂಗಮ್ಮ(ತಾಯಿ) ಮಕ್ಕಳಾದ ಸದಾನಂದ, ನಿತ್ಯಾನಂದ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಎಂಡೋ ಪೀಡಿತರ ಕುಟುಂಬವಾಗಿದ್ದು ಬಾಬು ಗೌಡ ಮತ್ತು ನಿತ್ಯಾನಂದ ಎಂಬವರು ಮಾತ್ರ ಆರೋಗ್ಯವಂತರಾಗಿದ್ದು ಮೃತ ಸದಾನಂದ ಸಂಪೂರ್ಣ ಮಾನಸಿಕ ಅಸ್ವಸ್ಥನಾಗಿದ್ದರು ಎನ್ನಲಾಗಿದೆ. ಆರೋಗ್ಯವಂತನಾಗಿದ್ದ ಎರಡನೆಯ ಮಗ ನಿತ್ಯಾನಂದ ಆರು ತಿಂಗಳ ಹಿಂದೆ ಅಪಘಾತಕ್ಕೀಡಾಗಿದ್ದರು.