News Kannada
Monday, November 28 2022

ಕರಾವಳಿ

ನಾಳೆ ಉಪ್ಪಿನಂಗಡಿಯಲ್ಲಿ ಆರೋಗ್ಯ ಮೇಳ - 1 min read

Photo Credit :

ನಾಳೆ ಉಪ್ಪಿನಂಗಡಿಯಲ್ಲಿ ಆರೋಗ್ಯ ಮೇಳ

ಪುತ್ತೂರು: ಕಣಚೂರು ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಮತ್ತು ಮಠ ಯೂತ್ ಫೆಡರೇಶನ್ ಹಾಗೂ ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಜ.8ರಂದು ಬೆಳಿಗ್ಗಿನಿಂದ ಮಧ್ಯಾಹ್ನದ ತನಕ ಉಪ್ಪಿನಂಗಡಿ ಹಳೆಗೇಟ್ ಬಳಿಯ ಅರಫಾ ವಿದ್ಯಾಕೇಂದ್ರದಲ್ಲಿ ಉಚಿತ ವೈದ್ಯಕೀಯ ಶಿಬರ ಆರೋಗ್ಯ ಮೇಳ ನಡೆಯಲಿದೆ ಎಂದು ಮಠ ಯೂತ್ ಫೆಡರೇಶನ್ನ ಗೌರವ ಸಲಹೆಗಾರ ನಝೀರ್ ಮಠರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ರೀಡಾ ಕಾರ್ಯಕ್ರಮ, ಬಡವರಿಗೆ ವಸತಿ ಯೋಜನೆ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಮಠ ಯೂತ್ ಫೆಡರೇಶನ್ ಈ ಭಾರಿ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಂಡಿದೆ. ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಣಚೂರು ಆಸ್ಪತ್ರೆಯ ಚೆಯರ್ಮ್ಯಾನ್ ಜನಾಬ್ ಹಾಜಿ ಯಂ ಕೆ.ಮೋನು, ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಡಿಷನಲ್ ಎಸ್ಪಿ ಡಾ ವೇದಮೂರ್ತಿ, ಅರಫಾ ವಿದ್ಯಾಕೇಂದ್ರದ ಅಧ್ಯಕ್ಷ ಕೆಪಿಎ ಸಿದ್ದೀಕ್, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ಗ್ರಾ.ಪಂ ಅಧ್ಯಕ್ಷ ಸದ್ಯಸರುಗಳು ಸೇರಿದಂತೆ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ ಅವರು ಶಿಬಿರದಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ ನಡೆಸಲಿದ್ದಾರೆ.

ಶಿಬಿರದಲ್ಲಿರುವ ತಪಾಸಣೆ:
ವೈದ್ಯಕೀಯ ಶಾಸ್ತ್ರ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಮೂಳೆ, ಕಿವಿ, ಮೂಗು, ಗಂಟಲು, ನೇತ್ರ, ದಂತ, ಚರ್ಮರೋಗ, ಮನೋರೋಗ, ಸೀಳು ತುಟಿ ವಿಭಾಗದ ತಜ್ಞರು ಶಿಬಿರದಲ್ಲಿ ಉಚಿತ ತಪಾಸಣೆ ನಡೆಸಲಿದ್ದಾರೆ. ಫಲಾನುಭವಿಗಳಿಗೆ ಉಚಿತ ಔಷಧಿಗಳು ಮತ್ತು ಉಚಿತ ರಕ್ತ ತಪಾಸಣೆ ಮಾಡಲಾಗುವುದು ಎಂದು ನಝೀರ್ ಮಠ ತಿಳಿಸಿದ್ದಾರೆ.

ಉಚಿತ ಶಸ್ತ್ರಚಿಕಿತ್ಸೆ:
ವೈದ್ಯಕೀಯ ಶಿಬಿರದಲ್ಲಿ ಕಣಚೂರು ಕ್ಯಾಂಪ್ ಕಾಡರ್್ ವಿತರಿಸಲಾಗುವುದು. ಕಾರ್ಡ್ ಹೊಂದಿದವರಿಗೆ ಅಗತ್ಯವಿದ್ದಲ್ಲಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ, ಉಚಿತ ಊಟದ ಸೌಲಭ್ಯ ಇದೆ ಎಂದು ನಝೀರ್ ಮಠ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಠ ಯೂತ್ ಫೆಡರೇಶನ್ನ ಅಧ್ಯಕ್ಷ ನಾಸಿರ್ ವೈ ಎನ್ ಕೆ. ಮಠ, ಉಪಾಧ್ಯಕ್ಷ ಎಂ.ಸಿದ್ದೀಕ್ ಮಠ, ಕಾರ್ಯದರ್ಶಿ ನೌಫಲ್ ಎನ್. ಎಂ. ಮಠ, ಸದಸ್ಯರಾದ ಕೆ.ಇದಿನಬ್ಬ ಅರಫಾ, ಮುಸ್ತಾಫ ಜೆ.ಎಂ ಉಪಸ್ಥಿತರಿದ್ದರು.

ಶಿಕ್ಷಣ ಮೇಳ, ಉಚಿತ ಆ್ಯಂಬುಲೆನ್ಸ್:
ಮಠ ಯೂತ್ ಫೆಡರೇಶನ್ನ ಮುಂದಿನ ಯೋಜನೆಯಲ್ಲಿ ಶಿಕ್ಷಣ ಮೇಳ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಜನವರಿ ತಿಂಗಳ ಅಂತ್ಯದೊಳಗೆ ಉಪ್ಪಿನಂಗಡಿಗೆ ಹೊಸ ಆ್ಯಂಬುಲೆನ್ಸ್ ಸೇವೆಯನ್ನು ರೀಯಾಯಿತಿ ದರದಲ್ಲಿ ಸಮರ್ಪಣೆ ಮಾಡಲಿದ್ದೇವೆ ಎಂದು ನಝೀರ್ ಮಠ ಹೇಳಿದರು.
 
 

See also  ಬೇಕರಿ, ಹಣ್ಣುಹಂಪಲು, ಬಾಟಲಿ ಕುಡಿಯುವ ನೀರಿನ ಘಟಕಗಳ ತಪಾಸಣೆಗೆ ಡಿಸಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು