News Kannada
Wednesday, February 01 2023

ಕರಾವಳಿ

ಉಳ್ಳಾಲ ದೇವಸ್ಥಾನದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು

Photo Credit :

ಉಳ್ಳಾಲ ದೇವಸ್ಥಾನದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು

ಉಳ್ಳಾಲ: ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟುವಿನಿಂದ ಉಳ್ಳಾಲ ಉಳಿಯಕ್ಕೆ ನಡೆದ ಹೊರೆ ದಿಬ್ಬಣ ಹಸಿರುವಾಣಿ ಹೊರೆಕಾಣಿಕೆಯ ವೈಭವದ ಶೋಭಾಯಾತ್ರೆಗೆ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ಮುಸ್ಲಿಂ ಬಾಂಧವರು ಪ್ರೀತಿಪೂರ್ವಕ ಸ್ವಾಗತಿಸಿ ತಂಪು ಪಾನೀಯ ಹಾಗೂ ಕುಡಿಯುವ ನೀರು ವಿತರಿಸಿ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಸೌಹಾರ್ದತೆಯನ್ನು ಮೆರೆದರು.

Glasses of 'Sherbets' uphold Hindu-Muslim unity in Ullal-1ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಅಮ್ಮನವರ ನೂತನ ಸ್ವರ್ಣ ಬಿಂಬ ಹಾಗೂ ಕಂಚಿನ ಬಿಂಬಗಳ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಉಳ್ಳಾಲ್ತಿ ಧವರ್ ಅರಸರ ಧರ್ಮ ನಡಾವಳಿ ಮಹೋತ್ಸವ ಜ.6 ರಿಂದ 12 ರವರೆಗೆ ನಡೆಯಲಿದೆ. ಆ ಪ್ರಯುಕ್ತ  ತೊಕ್ಕೊಟ್ಟು ಓವರ್ ಬ್ರಿಡ್ಜ್  ಬಳಿಯಿರುವ  ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಆರಂಭಗೊಂಡ  ಹೊರೆಕಾಣಿಕೆ ಮೆರವಣಿಗೆಗೆ ಉಳ್ಳಾಲ ಉಮಾಪುರಿಯ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ಚಾಲನೆ ನೀಡಿದರು.  

ಜಿಲ್ಲೆಯಾದ್ಯಂತ ದೇವಸ್ಥಾನ , ಮಂದಿರ ಹಾಗೂ ಸಂಘಟನೆ ಕಾರ್ಯಕರ್ತರನ್ನು ಸೇರಿಕೊಂಡ ಸುಮಾರು 1000ಕ್ಕೂ ಅಧಿಕ ಹಿಂದು ಬಾಂಧವರು  ಹೊರೆಕಾಣಿಕೆ ಮೆರವಣಿಗೆಯಲ್ಲಿ ವಾಹನಗಳಲ್ಲಿ ಮತ್ತು ನಡೆದುಕೊಂಡು ಪಾಲ್ಗೊಂಡರು. ಮಾಸ್ತಿಕಟ್ಟೆ  ಜಂಕ್ಷನ್ನಿನಲ್ಲಿ  50ಕ್ಕೂ ಅಧಿಕ ಮುಸ್ಲಿಂ ಬಾಂಧವರು ದೇವಸ್ಥಾನದ ಮೆರವಣಿಗೆಯನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಂಪು ಪಾನೀಯ ಮತ್ತು ಕುಡಿಯುವ ನೀರು ವಿತರಿಸಿದರು. ಕೋಮುಸೂಕ್ಷ್ಮ ಪ್ರದೇಶ ಅನಿಸಿಕೊಂಡ ಉಳ್ಳಾಲದಲಿ ಅಪರೂಪದ ಕ್ಷಣ ಸೌಹಾರ್ದತೆಯ ವಾತಾವರಣದೊಂದಿಗೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿತು.

ಪಾನೀಯ ವಿತರಣೆಯ ನೇತೃತ್ವ ವಹಿಸಿದ್ದ ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮಾತನಾಡಿ`  ಉಳ್ಳಾಲ ಭಾಗದಲ್ಲಿ ಎಲ್ಲರೂ ಜತೆಯಾಗಿ ಬಾಳುತ್ತಿದ್ದೇವೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ಎಲ್ಲರೂ ಫಾಲ್ಗೊಳ್ಳುವ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ  ತಂಪು ಪಾನೀಯ ವಿತರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಉಳ್ಳಾಲದಲ್ಲಿ ಕೆಡುಕು ಉಂಟು ಮಾಡುವ ಕೆಲವೇ ಮಂದಿಗೆ ಈ ಕ್ಷಣ ಪಾಠವಾಗಲಿದೆ. ಹಿಂದಿನಿಂದಲೂ ಜತೆಯಾಗಿಯೇ ಇದ್ದೇವೆ, ಮುಂದೆಯೂ ಹೀಗೆ ಬಾಳುತ್ತೇವೆ ಎಂದರು.

ಈ ವೇಳೆ ನಗರಸಭೆ ಸದಸ್ಯ ಮುಸ್ತಾಫ, ಸ್ಥಳೀಯರಾದ ಫೈರೋಝ್, ಅದ್ರಾಮ, ಮೋನು, ಅಹಮ್ಮದ್ ಬಾವಾ ಕೊಟ್ಟಾರ ಮೊದಲಾದವರು  ಭಾಗವಹಿಸಿ ತಂಪು ಪಾನೀಯಗಳನ್ನು ವಿತರಿಸಿದರು.

See also  ಬೆಳ್ತಂಗಡಿಯಲ್ಲಿ ಗೂಂಡಾ ರಾಜಕಾರಣಕ್ಕೆ ತೆರೆ: ನಳಿನ್ ಕುಮಾರ್ ಕಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು