News Kannada
Thursday, December 01 2022

ಕರಾವಳಿ

ಮಾನಸಿಕ ಖಿನ್ನತೆ…ಯುವತಿ ಆತ್ಮಹತ್ಯೆ !

Photo Credit :

ಮಾನಸಿಕ ಖಿನ್ನತೆ...ಯುವತಿ ಆತ್ಮಹತ್ಯೆ !

ಉಳ್ಳಾಲ: ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಂತೋಷ ನಗರದಲ್ಲಿ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ.

ಆನಂದ ಪೂಜಾರಿ ಎಂಬವರ ಪುತ್ರಿ ಮಧುಶ್ರೀ (21) ಆತ್ಮಹತ್ಯೆಗೈದಾಕೆ. ಶನಿವಾರ ಸಂಜೆ ತಂದೆ ಕೆಲಸಕ್ಕೆ ತೆರಳಿದ್ದು, ತಾಯಿ ಅಂಗಡಿಗೆ ಹೋದ ಸಂದರ್ಭ ಮನೆಯೊಳಗೆ ಚೂಡಿದಾರಿನ ಶಾಲನ್ನು ಪಕ್ಕಾಸಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೆತ್ತವರಿಗೆ ಈಕೆ ಓರ್ವಳೇ ಪುತ್ರಿಯಾಗಿದ್ದಳು. ಮಂಗಳೂರಿನ ಬ್ಯೂಟಿಪಾರ್ಲರಿನಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ಈಕೆ ಒಂದು ತಿಂಗಳಿನಿಂದ ಕೆಲಸಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದಳು. ಆತ್ಮಹತ್ಯೆ ನಡೆಸುವ ಮುನ್ನ ಕೈಯಲ್ಲಿ ‘ಸೂರಜ್’ ಎಂಬಾತನ ಹೆಸರನ್ನು ಬರೆದಿಟ್ಟುಕೊಂಡಿದ್ದಾಳೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಕರೆ ಹಾಗೂ ಕೈಯಲ್ಲಿ ಬರೆದಿರುವ ಹೆಸರಿನ ಕುರಿತು ತನಿಖೆ ಆರಂಭಿಸಿದ್ದಾರೆ. ಆದರೆ ಹೆತ್ತವರು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ದೂರಿಕೊಂಡಿದ್ದು, ಯಾರ ಮೇಲೆಯೂ ಸಂಶಯ ವ್ಯಕ್ತಪಡಿಸಿಲ್ಲ.  

 

See also  ಉದ್ಯೋಗದ ಹೆಸರಿನಲ್ಲಿ ಶಾಸಕರಿಂದ ಲಂಚ: ಅಸ್ನೋಟಿಕರ್ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು