News Kannada
Monday, January 30 2023

ಕರಾವಳಿ

ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡಾನೆ ಸಾವು

Photo Credit :

ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡಾನೆ ಸಾವು

ಸುಳ್ಯ: ಸಂಪಾಜೆ ಮೀಸಲು ಅರಣ್ಯದ ಬಂಟೋಡಿ ದೊಡ್ಡಕಜೆ ಎಂಬಲ್ಲಿ ಆನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲ್ಲಾನೆ ಜಾತಿಗೆ ಸೇರಿದ ಸುಮಾರು 20 ವರ್ಷ ಪ್ರಾಯದ ಗಂಡಾನೆಯು ಸಾವನ್ನಪ್ಪಿದ್ದು ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆನೆಗಳ ನಡುವೆ ಉಂಟಾದ ಕಾದಾಟದಿಂದ ಆನೆ ಸತ್ತಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸತ್ತ ಆನೆಯ ಹೊಟ್ಟೆ ಮತ್ತು ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯದಲ್ಲಿ ಬೀಟ್ ಗೆ ಹೋದ ಸಂದರ್ಭದಲ್ಲಿ ಆನೆ ಸತ್ತಿರುವುದು ಗಮನಕ್ಕೆ ಬಂದಿದೆ. ಎತ್ತರ ಕಡಿಮೆ ಇರುವ ಕಲ್ಲಾನೆ ಗುಂಪಿಗೆ ಸೇರಿದ ಆನೆ ಇದಾಗಿದ್ದು ಸುಮಾರು ಐದು ಅಡಿ ಎತ್ತರದ ಗಂಡಾನೆಗೆ ಒಂದು ಅಡಿಗಿಂತಲೂ ಹೆಚ್ಚು ಉದ್ದದ ಕೋರೆಯೂ ಇತ್ತು. ದೊಡ್ಡಕಜೆ ಭಾಗ ಹೆಚ್ಚು ತೇವಾಂಶ ಇರುವ ಪ್ರದೇಶವಾಗಿದ್ದು ಇದರ ಸುತ್ತ ಮುತ್ತ ಕಾಡಾನೆಗಳ ಹಿಂಡು ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು ಈ ಸಂದರ್ಭದಲ್ಲಿ ಆನೆಗಳ ಮಧ್ಯೆ ಕಾದಾಟ ಉಂಟಾಗಿ ಆನೆ ಸಾವನ್ನಪ್ಪಿರುವ ಸಾಧ್ಯತೆ ಇದೆ. ಸತ್ತ ಆನೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಸ್ಕರಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ, ವಲಯ ಅರಣ್ಯಾಧಿಕಾರಿ ಪ್ರಶಾಂತ್ಕುಮಾರ್ ಪೈ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

See also  ಪ್ರವಾಹ ಸಂತ್ರಸ್ತರಿಗೆ ಚೆಕ್ ವಿತರಿಸಿದ ಶಾಸಕ ಹರೀಶ್ ಪೂಂಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು