ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ಕಳೆಂಜ ಎಂಬಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ರಿಕ್ಷಾ ಹಾಗೂ ಮಾಂಸವನ್ನು ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಬಂಧಿತರು ಸ್ಥಳಿಯರಾದ ವಿಶ್ವನಾಥ, ಜೋಸೆಫ್, ಜೋನ್, ಕಿಟ್ಟುಮುಗೇರ ಎಂಬವರಾಗಿದ್ದಾರೆ. ಸ್ಥಳಿಯ ಹಿಂದು ಸಂಘಟನೆಗಳ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದು ಸುಮಾರು 30 ಕೆಜಿ ಮಾಂಸ ರಿಕ್ಷಾ ಹಾಗೂ ಇದಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.