ಮೂಡುಬಿದಿರೆ: ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಾಯಕಲ್ಪ ಘಟಕವನ್ನು ಸ್ಥಾಪಿಸಲಾಗಿದೆ.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸೋಮವಾರ ಕಾಯಕಲ್ಪಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸಾ ಪದ್ಧತಿ ಸಹಕಾರಿ. ಆಯುರ್ವೇದಕ್ಕೆ ಆಳ್ವಾಸ್ನವರು ಹಲವು ವಿಧದಲ್ಲಿ ನೀಡುತ್ತಿರುವ ಸೇವೆ ಅನನ್ಯ. `ಆಳ್ವಾಸ್ ಕಾಯಕಲ್ಪ’ ಯೋಜನೆ ಆಳ್ವಾಸ್ ಮುಖಾಂತರ ಮೂಡುಬಿದಿರೆಯಲ್ಲಿ ಸ್ಥಾಪನೆಯಾಗಿರುವುದು ಸಂತಸದ ವಿಷಯ. ಪಂಚಕರ್ಮದಂತಹ ಪಾರಂಪರಿಕ ಚಿಕಿತ್ಸಾ ಪದ್ಧತಿಯ ಉತ್ತೇಜನಕ್ಕೆ ಇದು ನಾಂದಿಯಾಗಲಿ ಎಂದರು.
ಸಸ್ಯ ಕರ್ಮ ಚಿಕಿತ್ಸೆಯನ್ನು ಮಾಡುವುದರ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಚಿಕಿತ್ಸೆಗೆ ಚಾಲನೆ ನೀಡಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ವಿವೇಕ್ ಆಳ್ವ, ಆಳ್ವಾಸ್ ಆಯುವರ್ೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿನಯಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಆರೋಗ್ಯಕ್ಕೆ ಕಾಯಕಲ್ಪ:
ಕಾಯಕಲ್ಪವು ಸುಖಸಾಧನ (ವಿಶ್ರಾಮ ಚಿಕಿತ್ಸೆ), ರಸಾಯನ ಸಾಧನ (ನವ ಚೈತನ್ಯ/ ಪುನರುಜ್ಜೀವನ ಚಿಕಿತ್ಸೆ) ಸ್ವಸ್ಥ ಸಾಧನ ಚಿಕಿತ್ಸೆ (ಆರೋಗ್ಯ ರಕ್ಷಣೆ), ಶೋಧನ ಕಲ್ಪ (ದೇಹ ಸಂಶುದ್ಧಿ ಚಿಕಿತ್ಸೆ) ಹಾಗೂ ಸೌಂದರ್ಯ ಸಾಧನ (ಸೌಂದರ್ಯ ಚಿಕಿತ್ಸೆ) ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಕಾರ್ಯ ನಿರ್ವವಹಿಸಲಿದ್ದು, ತಜ್ಞ ಆಯುರ್ವೇದ ವೈದ್ಯರು ಚಿಕಿತ್ಸೆ ಮತ್ತು ಸಲಹೆಗೆ ಲಭ್ಯವಿರುತ್ತದೆ.