News Kannada
Tuesday, February 07 2023

ಕರಾವಳಿ

ಗುಂಡೇಟಿಗೆ ಓರ್ವ ಬಲಿ: ಮೃತನ ವಿರುದ್ಧವೇ ಆತ್ಮಹತ್ಯೆ ಮತ್ತು ಕೊಲೆ ಯತ್ನ ದಾಖಲು !

Photo Credit :

ಗುಂಡೇಟಿಗೆ ಓರ್ವ ಬಲಿ: ಮೃತನ ವಿರುದ್ಧವೇ ಆತ್ಮಹತ್ಯೆ ಮತ್ತು ಕೊಲೆ ಯತ್ನ ದಾಖಲು !

ಬಂಟ್ವಾಳ: ಶುಕ್ರವಾರ ತಡರಾತ್ರಿ ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ನಡೆದ ಗುಂಡೇಟಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಇಲ್ಲಿನ ನಿವಾಸಿ ಇಂದ್ರ ಕುಮಾರ್(64) ರೈಫಲ್ ನಿಂದ ಗುಂಡುಹಾರಿಸಿ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ಇವರು ತನ್ನ ಮಗನ ಮೇಲೆ ಗುಂಡುಹಾರಿಸಿ ಕೊಲೆಗೆ ಯತ್ನಿಸಿದ್ದು, ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ಘಟನೆ ವಿವರ:
ಕೃಷಿಕರಾಗಿದ್ದ ಇಂದ್ರಕುಮಾರ್ ಅವರ ಪುತ್ರ ಚಂದ್ರಹಾಸ್ ರಾತ್ರಿ 9.30 ರ ವೇಳೆಗೆ ತನ್ನ ಮನೆಗೆ ಬಂದಿದ್ದು, ತಾಯಿಯ ಜೊತೆ ಊಟಕ್ಕೆ ಕುಳಿತ್ತಿದ್ದರು. ಈ ವೇಳೆ ಬಂದೂಕು ಶಬ್ದ ಇವರ ಕಿವಿಗೆ ಕೇಳಿಸಿದ್ದು, ಅರ್ಧಕ್ಕೆ ಊಟ ಬಿಟ್ಟು ಎದ್ದಿದ್ದಾರೆ. ಇದೇ ವೇಳೆ ಅವರ ತಂದೆ, ಚಂದ್ರಹಾಸ ಮೇಲೆ ಗುಂಡು ಹಾರಿಸಿದ್ದು, ಕೂದಲೆಳೆಯಿಂದ ಚಂದ್ರಹಾಸರು ಪಾರಾಗಿದ್ದಾರೆ. ತಕ್ಷಣ ಅವರು ಅಲ್ಲಿಂದ ಹೊರಗೆ ಓಡಿ, ಪಕ್ಕದ ಮನೆಯ ಗೇಟು ತೆರೆಯುತ್ತಿದ್ದಂತೆಯೇ ತಂದೆ ಇಂದ್ರ ಕುಮಾರ್ ಇನ್ನೊಂದು ಸುತ್ತು ಗುಂಡು ಹಾರಿಸಿದ್ದು, ಚಂದ್ರಹಾಸ ಅವರು ಬೆನ್ನಿಗೆ ಗಾಯವಾಗಿದೆ. ಈ ವೇಳೆ ತನ್ನ ಗುಂಡಿನಿಂದ ಮಗ ಸತ್ತಿರಬಹುದೆಂಬ ಅನುಮಾನದಲ್ಲಿ ಇಂದ್ರ ಕುಮಾರ್ ಅವರು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆ ಕಳೆದ 20 ವರ್ಷಗಳಿಂದ ತನ್ನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದು, ಕೆಲ ತಿಂಗಳಿನಿಂದ ನಿನ್ನನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸುತ್ತಿದ್ದರು ಎಂದು ಮಗ ಚಂದ್ರಹಾಸ ಈ ಹಿಂದೆಯೇ ವಿಟ್ಲ ಠಾಣೆಗೆ ದೂರು ನೀಡಿದ್ದರು. ಬಳಿಕ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಲಾಗಿತ್ತು. ಇದೀಗ ಚಂದ್ರಹಾಸ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮೃತ ಇಂದ್ರ ಕುಮಾರ್ ವಿರುದ್ದ  ಕೊಲೆಯತ್ನ ಹಾಗೂ ಆತ್ಮಹತ್ಯೆ  ಪ್ರಕರಣ ದಾಖಲಾಗಿದೆ.
 

See also  ರಾಷ್ಟ್ರಮಟ್ಟದ ಗಮನ ಸೆಳೆದ ಮೂಡುಬಿದಿರೆ ಸಾವಿರ ಕಂಬದ ಬಸದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು