ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಬಡಿದು ಇಬ್ಬರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಗರ ಹೊರವಲಯದ ಸಂತೋಷ್ ನಗರದಲ್ಲಿ ನಡೆದಿದ್ದು, ಒಂದು ಗೂಡಂಗಡಿ, ಒಂದು ಬೈಕ್ ಹುಡಿಯಾಗಿದೆ.
ಕಾಞ೦ಗಾಡ್ ನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಗೋಡೆಗೆ ಬಡಿದು ಈ ದುರ್ಘಟನೆ ನಡೆದಿದೆ. ಸಮೀಪ ಇದ್ದ ಗೂಡಂಗಡಿ ಮತ್ತು ಬೈಕ್ ಮೇಲೆ ಹರಿದು ಗೋಡೆಗೆ ಬಡಿದಿದೆ. ಸಮೀಪದಲ್ಲಿ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮ ರ್ ಗೆ ಬಡಿಯುತ್ತಿದ್ದಲ್ಲಿ ಬಾರಿ ದುರಂತ ಸಂಭವಿಸುತ್ತಿತ್ತು. ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿದೆ ಎನ್ನಬಹುದು.
ಬಸ್ಸಿನ ಒಂದು ಭಾಗ ಜಖಂಗೊಂಡಿದೆ. ಬಸ್ಸು ಪ್ರಯಾಣಿಕ ಹಾಗೂ ಗೂಡಂಗಡಿ ಬಳಿ ನಿಂತಿದ್ದ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಅಲ್ಪ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದೆ . ವಿದ್ಯಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.