ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿಯರಿಂಗ್ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿಗಳಿಂದ ತಾಂತ್ರಿಕ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬೆಂಗಳೂರಿನ ಇಸ್ರೋ ಮಿನಿ ಸ್ಟೂಡೆಂಟ್ ಪ್ರಾಜೆಕ್ಟ್ಸ್ ಮುಖ್ಯಸ್ಥ ಹಿರಿಯಣ್ಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಇಸ್ರೋದ ಇತಿಹಾಸ ಮತ್ತು ಅವಶ್ಯಕತೆ ಬಾಹ್ಯಾಕಾಶ ತಂತ್ರಜ್ಞಾದ ಅವಶ್ಯಕತೆ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀಡಬೇಕಾಗಿರುವ ಕೊಡುಗೆ ಬಗ್ಗೆ ವಿವರಿಸಿದರು.
ಬೆಂಗಳೂರು ಇಎಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ವಿನೋದ್ ಅಗರ್ ವಾಲ್ ಸ್ಟೂಡೆಂಟ್ ಸ್ಯಾಟ್ಲೈಟ್ ನ ಪ್ರಸ್ತುತತೆ, ಪೈಸ್ಯಾಟ್ ಪ್ರಾರಂಭವಾದ ಬಗೆ ಮತ್ತು ಐದು ವರ್ಷಗಳಲ್ಲಿ ಸ್ಯಾಟ್ಲೈಟ್ ಅಭಿವೃದ್ದಿ ಪಡಿಸುವಾಗ ಎದುರಿಸಿದ ಸಂಕಷ್ಟಗಳ ಬಗ್ಗೆ ವಿವರಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಸರ್ ಎಂ ವಿ ಇಸ್ರೊ ಚೆರ್ ಪ್ರೊಪೆಸರ್ ಡಾ. ಬಾಲಕೃಷ್ಣನ್ ಮಾಣಿಕ್ಯಂ ವಿಜ್ಞಾನಿ ಮಾಣಿಕ್ಯಮ್ ಮಾತನಾಡಿ ಇತ್ತೀಚಿನ ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಯನ್ನು ವಿವರಿಸಿದರು.
ಆಟೊಮೆಟಿಕ್ ವೆದರ್ ಸ್ಟೇಶನ್ ನ ಅಗತ್ಯತೆಯನ್ನು ಪ್ರತಿಪಾದಿಸಿದವರು ಅದರ ಅವಶ್ಯಕತೆಯನ್ನು ವಿವರಿಸಿ ಆಳ್ವಾಸ್ ಸಂಸ್ಥೆ ಈ ಕೇಂದ್ರವನ್ನು ಇಲ್ಲಿ ಸ್ಥಾಪಿಸಲು ಚಿಂತನೆಗೆ ಸಂತಸ ವ್ಯಕ್ತಪಡಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಯೋಜಕ ಡಾ.ದತ್ತಾತ್ರೇಯ ಉಪಸ್ಥಿತರಿದ್ದರು. ಉಪನ್ಯಾಸಕಿ ತಾನ್ಯ ಮೆಂಡೆಸ್ ನಿರೂಪಿಸಿದರು. ಉಪನ್ಯಾಸಕ ಸಾಯಿಶ್, ಸಂತೋಶ್ ಮತ್ತು ಪವರ್ೇಜ್ ಅಥಿತಿಗಳನ್ನು ಪರಿಚಯಿಸಿದರು.