ಕಾಸರಗೋಡು: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸು ಮಾಲಕರು ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ವಿದ್ಯಾನಗರದಲ್ಲಿರುವ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆಯಲ್ಲಿ ತೆರಳಿದ ಮಾಲಕರು ಧರಣಿ ಕುಳಿತರು.
ಧರಣಿಯನ್ನು ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣಿ ಜೋಸೆಫ್ ಉದ್ಘಾಟಿಸಿದರು. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಕೆ .ಶಂಕರ ನಾಯಕ್, ಸಿ. ಎ ಮುಹಮ್ಮದ್ ಕು೦ಞ, ಎನ್. ಎಂ ಹಸೈನಾರ್, ಎ . ಲಕ್ಷ್ಮಣನ್, ತಾರನಾಥ್ ಮಧೂರು, ರಾಧಾಕೃಷ್ಣನ್, ಪ್ರದೀಪ್, ವಿ .ಎಂ ಶ್ರೀಪತಿ ನೇತೃತ್ವ ನೀಡಿದರು.
ಬಸ್ಸು ಪ್ರಯಾಣ ದರ ಏರಿಕೆ ಮಾಡಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಿಸಬೇಕು, ರಸ್ತೆ ತೆರಿಕೆ ಹೆಚ್ಚಳ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಈ ಧರಣಿ ನಡೆಸಿದ್ದು, ಜನವರಿ ೨೪ ರಂದು ಬಸ್ಸು ಮುಷ್ಕರ ನಡೆಸಲು ಸಂಘವು ತೀರ್ಮಾನಿಸಿದೆ.