ಪುತ್ತೂರು: ಕಳೆದ ಎಂಟು ತಿಂಗಳ ಹಿಂದೆ ದರ್ಬೆ ವೃತ್ತದಿಂದ ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಕಾವೇರಿಕಟ್ಟೆಯಲ್ಲಿ ಧರೆಗುರಳಿ ರಸ್ತೆ ಬದಿಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಅಶ್ವತ್ಥ ಮರಕ್ಕೆ ಕೊನೆಗೂ ತೆರವು ಭಾಗ್ಯ ಸಿಕ್ಕಿದೆ. ರಸ್ತೆ ಬದಿಗೆ ಉರುಳಿ ಬಿದ್ದ ಮರ ತೆರವುಗೊಳಿಸುವವರು ಯಾರೆಂಬ ಇಲಾಖೆಗಳ ನಡುವಿನ ಹಗ್ಗ-ಜಗ್ಗಾಟದ ಪರಿಣಾಮ, ರಸ್ತೆ ಬದಿಯಿಂದ ಮರ ತೆರವುಗೊಂಡಿರಲಿಲ್ಲ. ಇದರಿಂದ ವಾಹನ ಸಂಚಾರರು ಪರದಾಟ ನಡೆಸುವ ಸ್ಥಿತಿ ನಿರ್ಟಮಾಣವಾಗಿತ್ತು.
ಮರ ಧರೆಗುರುಳಿತ್ತು
ದರ್ಬೆ ವೃತ್ತದಿಂದ ಒಂದು ಪರ್ಲಾಂಗು ದೂರದ ಕಾವೇರಿ ಕಟ್ಟೆಯಲ್ಲಿನ ಬೃಹತ್ ಗಾತ್ರದ ಅಶ್ವತ್ಥ ಮರ ಧರೆಶಾಯಿಯಾಗಿತ್ತು. ನಸುಕಿನ ಜಾವ 3 ಗಂಟೆಯ ಹೊತ್ತಿಗೆ ಈ ಘಟನೆ ನಡೆದ ಕಾರಣ, ದೊಡ್ಡ ಅನಾಹುತ ನಡೆದಿರಲಿಲ್ಲ. ಮರ ಬಿದ್ದ ಸಂದರ್ಭ ಹತ್ತಾರು ವಿದ್ಯುತ್ ಕಂಬಗಳು ಧರೆ ಶಾಹಿಯಾಗಿತ್ತು. ಆರಂಭದ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಕೊಂಬೆ-ರೆಂಬೆ ತುಂಡರಿಸುವ ಕಾರ್ಯ ನಡೆದದ್ದೂ ಬಿಟ್ಟರೆ, ಅದನ್ನು ಸ್ಥಳಾಂತರಿಸುವ ಕೆಲಸ ಆಗಿರಲಿಲ್ಲ. ಮರದ ಗೆಲ್ಲು, ದಿಮ್ಮಿ ಎಲ್ಲವೂ ರಸ್ತೆ ಬದಿಯಲ್ಲಿ ಇತ್ತು.
ಇಲಾಖೆಯ ನಡುವಿನ ಗೊಂದಲ
ಅಶ್ವತ್ಥ ಮರ ತೆರವು ಕಾರ್ಯ ಮಾಡಬೇಕಾದ ಇಲಾಖೆ ಯಾವುದೂ ಎಂಬ ಗೊಂದಲ ಸೃಷ್ಟಿಯಾಗಿತ್ತು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಈ ರಸ್ತೆ ಸೇರಿದ್ದರೆ, ನಗರಸಭಾ ವ್ಯಾಪ್ತಿಯೊಳಗೆ ಈ ಪ್ರದೇಶ ಬರುತ್ತದೆ. ಮರದ ವಿಚಾರದಲ್ಲಿ ಅರಣ್ಯ ಇಲಾಖೆ ಕೂಡ ಇಲ್ಲಿ ಹಕ್ಕು ಹೊಂದಿದೆ. ತೆರವಿನ ಬಗ್ಗೆ ಮೂರು ಇಲಾಖೆ ಒಬ್ಬರ ಮೇಲೆ ಒಬ್ಬರು ಕೈ ತೋರಿಸಿ ಕಾಲ ಕಳೆದು ಹೋಗಿತ್ತು.
ಲೋಕೋಪಯೋಗಿ ಇಲಾಖೆಯ ಪ್ರಕಾರ, ಮರ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ಮಾತ್ರ ನಮಗೆ ತೆರವು ಮಾಡಲು ಅಕಾರ ಇರುವುದು. ಅದೇ ತರಹ ಮರ ಬಿದ್ದ ಮೇಲೆ ಅದನ್ನು ತೆರವು ಮಾಡಬೇಕಾದದ್ದು ಇಲಾಖೆಯ ಜವಬ್ದಾರಿ. ಅದಕ್ಕೆ ಲೋಕೋಪಯೋಗಿ ಇಲಾಖೆ ಹೊಣೆ ಅಲ್ಲ ಎನ್ನುವ ವಾದ ಮುಂದಿಟ್ಟರೆ, ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಲಿಖಿತ ಅಜರ್ಿ ಬಂದಿಲ್ಲ. ತೆರವುಗೊಳಿಸಿದ ಮರವನ್ನು ಸುಳ್ಯ ಡಿಪೋಗೆ ಕೊಂಡೊಯ್ಯಬೇಕು. ಅದಕ್ಕೆ ಖರ್ಚು ಭರಿಸಲು ಇಲಾಖೆಯಲ್ಲಿ ನರ್ಿಷ್ಟ ಫಂಡ್ ಇಲ್ಲ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಟೆಂಡರ್ ಹಾಕಿ ವಿಲೇವಾರಿ ಮಾಡಬಹುದು ಎನ್ನುವ ಉತ್ತರ ಅರಣ್ಯ ಇಲಾಖೆಯದ್ದಾಗಿತ್ತು. ತೆರವು ಅರಣ್ಯ ಇಲಾಖೆಯ ಜವಬ್ದಾರಿ ಎಂದೂ ನಗರಸಭೆ ಹೇಳಿತ್ತು.
ಕೊನೆಗೂ ಮುಕ್ತಿ
ಅರಣ್ಯ ಇಲಾಖೆಗೆ ಕೊನೆಗೂ ಟೆಂಡರ್ ಕರೆದು ಮರ ತೆರವಿಗೆ ಕ್ರಮ ಕೈಗೊಂಡಿತ್ತು. ಗುತ್ತಿಗೆ ಪಡೆದವರು ವಾರದ ಹಿಂದೆ ಮರವನ್ನು ಸ್ಥಳದಿಂದ ವಿಲೇವಾರಿ ಮಾಡಿದ್ದಾರೆ. ಪರಿಣಾಮ ವಾಹನ ಓಡಾಟಕ್ಕೆ ರಿಲೀಫ್ ಸಿಕ್ಕಿದೆ.
ಅಪಾಯಕಾರಿ ಗೆಲ್ಲು..!
ಕಾವೇರಿಕಟ್ಟೆಯಿಂದ-ಕೂರ್ನಡ್ಕದ ತನಕ ರಸ್ತೆ ಬದಿಗಳಲ್ಲಿ ಬೃಹತ್ ಗಾತ್ರದ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ ಚಾಚಿವೆ. ಅದು ಅಪಾಯ ಆಹ್ವಾನಿಸುತ್ತಿದ್ದು, ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಈ ನಿಟ್ಟಿನಲ್ಲಿ ಜಂಟಿ ಪ್ರಯತ್ನ ಮಾಡಬೇಕಿದೆ ಅನ್ನುತ್ತಾರೆ ವಾಹನ ಸವಾರರು.