ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಂತಾರಾಷ್ಟ್ರಿಯ ಮಟ್ಟದ ಪನ ಪದವಿಪೂರ್ವ ಕಾಲೇಜು ಪ್ರಾರಂಭಗೊಂಡಿದ್ದು, ಕಾಲೇಜು ಸದಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಕೂಡಿದೆ.
ಪನ ಪಿಯು ಕಾಲೇಜು ವಿನೂತನ ಉಪಕ್ರಮಗಳನ್ನುಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳ ಮೇಲೆ ಬೊಧನೆ ಹೇರುವ ಬದಲು ಶಿಕ್ಷಣದಲ್ಲಿ ಅವರಿಗೆ ಮೂಡಿಸಿ, ಪ್ರತಿಯೊಂದು ಪಠ್ಯವನ್ನು ಸ್ವತ: ಪ್ರಾಯೋಗಿಕವಾಗಿ ಮಾಡುವ ಮೂಲಕ ಸ್ವ-ಅನುಭವದಿಂದ ಜ್ಞಾನಾರ್ಜನೆಯ ಪರಿಕಲ್ಪನೆಯನ್ನು ಪನ ಕಾಲೇಜು ಸಾಕಾರಗೊಳಿಸುತ್ತಿದೆ. ಇದಕ್ಕೆ ನಿರಂತರ ಸಂಶೋಧನೆ, ಪ್ರಯೋಗ ಕೈಗೊಂಡು ಹೊಸ ಮಾದರಿ ಸಿದ್ದಪಡಿಸಿದೆ.
ಪನ ಸ್ವಕಲಿಕೆ ಮಾದರಿ ಎಂಬ ಕ್ರಾಂತಿಕಾರಿ ಯೋಜನೆ ರೂಪುಗೊಂಡಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ. ಹೊಸ ಮಾದರಿ ಪ್ರಸ್ತುತ ಚಾಲನೆಯಲ್ಲಿರುವ ಯಾಂತ್ರಿಕ ರೀತಿಯ ಶಿಕ್ಷಣದ ಬದಲು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಗೆ ಒತ್ತು ನೀಡಿ ಪ್ರಯೋಗ, ಸಂಶೋಧನೆ ಮೂಲಕ ತಾವೇ ಮಾಡಿ, ಅನುಭವಿಸಿ ಶಿಕ್ಷಣ ಪಡೆಯುವ ವ್ಯವಸ್ಥೆ ಒಳಗೊಂಡಿದೆ.
ವಿದ್ಯಾರ್ಥಿಗಳಿಗೆ ಜ್ಞಾನದ ವರ್ಗಾವಣೆಯಲ್ಲಿ ಪ್ರಮುಖವಾದುದು ನಿರಂತರ ಕಲಿಕೆ ಈ ಮೂಲಕ ಮನಸ್ಸಿನಲ್ಲಿ ವಿಚಾರಗಳನ್ನು ಕನ್ ಸ್ಟ್ರಕ್ಟಿವ್ ಆಗಿ ತುಂಬುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಚಿಂತನೆ, ಪ್ರಶ್ನೆ ಮತ್ತು ಉತ್ರ ಕಂಡುಕೊಳ್ಳುವ ಮನಸ್ಸು ಕಟ್ಟಲಾಗುತ್ತದೆ. ಅತ್ಯುನ್ನತ ಶೈಕ್ಷಣಿಕ ಗುಣಮಟ್ಟ ಕೌನ್ಸಿಲ್ ಜೊತೆಯಲ್ಲಿ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ಮತ್ತು ಜೀವನ ಕೌಶಲ್ಯಗಳನ್ನು ತಿಳಿಸುವ ಶಿಕ್ಷಣ, ವಿಶಾಲ ಕ್ಯಾಂಪಸ್ ನೊಳಗೆ ಕಾಲೇಜ್ ಹಾಸ್ಟೆಲ್ ಸೌಲಭ್ಯ, ಸಿದ್ದಾಂತ ಮತ್ತು ಪ್ರಾಯೋಗಿಕ ಜ್ಞಾನವನ್ನು ಸಮತೋಲಿತವಾಗಿ ಧಾರೆ ಎರೆಯಬಲ್ಲ ಅನುಭವಿ, ಪ್ರಾಧ್ಯಾಪಕ ವರ್ಗ, ಓದಿನ ಬಗ್ಗೆ ವಿಶೇಷ ತರಬೇತಿ ಹಾಗೂ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮ ಪುಸ್ತಕಗಳನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯ, ಅತ್ಯಾಧುನಿಕ ತಂತ್ರಜ್ಞಾನಾಧಾರಿತ ವಿಶಾಲ ಪ್ರಯೋಗಾಲಯಗಳು, ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.
ವಿದ್ಯಾಭ್ಯಾಸದ ಜತೆಗೆ ಉತ್ತಮ ಗುಣ ನಡತೆಗೆ ಪನ ಶಿಕ್ಷಣ ಸಂಸ್ಥೆ ಒತ್ತು ನೀಡಲಿದೆ ಮತ್ತು ಆಕಾಂಕ್ಷಿಗಳಿಗೆ ಜ್ಞಾನ ಸಂಪಾದನೆಗೆ ಸೂಕ್ತ ಪರಿಸರವನ್ನು ಒದಗಿಸಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಬದಲಾವಣೆಯಾಗಿ ಸರ್ವತೋಮುಖ ಅಭಿವೃದ್ಧಿಯಾಗಲು ಪನ ಪ್ರೇರಣೆ ನೀಡಲಿದೆ. ತನ್ಮೂಲಕ ಉತ್ತಮ ವಿದ್ಯಾವಂತ ಯುವ ಜನತೆಯನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಲಿದೆ.