ಮೂಡುಬಿದಿರೆ: ದರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಣಪಿಲ ಕುಡ್ವರಂಗಡಿ ಎಂಬಲ್ಲಿ 63 ಕೆ.ವಿ. ಸಾಮಥ್ರ್ಯದ ನೂತನ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ನವೀಕೃತ ವಿದ್ಯುತ್ ಸಂಪರ್ಕವನ್ನು ಶನಿವಾರ ಶಾಸಕ ಅಭಯಚಂದ್ರ ಜೈನ್ ಉದ್ಘಾಟಿಸಿದರು.
11 ವಿದ್ಯುತ್ ಕಂಬಗಳು ಸೇರಿದಂತೆ ಈ ಪ್ರದೇಶದ ವಿದ್ಯುತ್ ಲೈನ್ ಅನ್ನು ನವೀಕರಣಗೊಳಿಸಲಾಗಿದ್ದು, ಹೆಚ್ಚಿನ ಸಾಮಥ್ರ್ಯಕ್ಕಾಗಿ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ. ನೂತನ ಸಂಪರ್ಕದಿಂದ ವಾಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಜನರಿಗೂ ಅನುಕೂಲವಾಗಲಿದೆ. ವಾಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ, ದರೆಗುಡ್ಡೆ ಗ್ರಾ.ಪಂ. ಸದಸ್ಯ ಸುಭಾಸ್ಚಂದ್ರ ಚೌಟ, ಜಯಶೆಟ್ಟಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಶಿವಾನಂದ ಎಸ್. ಪಾಂಡ್ರು, ಸುಪ್ರಿಯಾ ಡಿ. ಶೆಟ್ಟಿ, ಪಣಪಿಲ ಅರಮನೆಯ ಶ್ರೀವರ್ಮ ಜೈನ್, ಮಾಜಿ ಗ್ರಾ.ಪಂ. ಸದಸ್ಯ ದೇವರಾಜ್, ಅಳಿಯೂರು ಎಸ್ಡಿಎಂಸಿ ಅಧ್ಯಕ್ಷ ಸುಕುಮಾರ್ ಜೈನ್, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಬೆಳುವಾಯಿ ಉಪವಿಭಾಗದ ಅಧಿಕಾರಿ ಬಾಲಕೃಷ್ಣ, ಸದಾನಂದ ಕುಡ್ವ, ಬೇಮಂಗಡಿ ಸಾಧು ಶೆಟ್ಟಿ, ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.