ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹಲವಾರು ಸ್ಥಳೀಯ ಸುದ್ದಿ ವಾಹಿನಿಗಳಿದ್ದರೂ ಈ ಎಲ್ಲಾ ಸುದ್ದಿ ಮಾಧ್ಯಮಗಳಿಗಿಂತ ನಮ್ಮ “ಮುಕ್ತ ಟಿವಿ” ತುಸು ಭಿನ್ನವಾಗಿ ನಿಲ್ಲುತ್ತದೆ. ಕೇವಲ ವಾರ್ತಾವಾಚನ ಅಥವಾ ಮನೋರಂಜನೆ ನಮ್ಮ ಉದ್ದೇಶವಲ್ಲ. ದೃಶ್ಯಮಾಧ್ಯಮಗಳು ಪ್ರಬಲ ಅಸ್ತ್ರವಾಗಿರುವ ಈ ಕಾಲಘಟ್ಟದಲ್ಲಿ ಇದೇ ಮಾಧ್ಯಮವನ್ನು ಬಳಸಿ ಸಾಮಾಜಿಕ ಬದಲಾವಣೆಯೊಂದಕ್ಕೆ ಮುನ್ನುಡಿ ಬರೆಯಬೇಕೆಂಬ ಹಂಬಲ ನಮ್ಮದು. ಜಿಲ್ಲೆಯ ಜನರ ನೋವು- ನಲಿವುಗಳಿಗೆ ಕನ್ನಡಿ ಹಿಡಿಯುವ ಪುಟ್ಟ ಪ್ರಯತ್ನಕ್ಕೆ ನಮ್ಮ ವಾಹಿನಿ ಮುಂದಾಗಿದೆ.
ಕರಾವಳಿ ಭಾಗದ ಜನಜೀವನದಲ್ಲಿ ಹಾಸು ಹೊಕ್ಕಿರುವ ಸಾಂಸ್ಕೃತಿಕ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯಕ್ಕೂ ನಾವು ಮುಂದಡಿ ಇಡಲಿದ್ದೇವೆ. ಜನರ ಪ್ರಮಾಣಿಕ ದನಿಯಾಗುವ ಮೂಲಕ ಉಭಯ ಜಿಲ್ಲೆಗಳ ಸಾಕ್ಷಿ ಪ್ರಜೆಯಾಗುವ ಕನಸು ನಮ್ಮದು. ದೇಶ, ರಾಜ್ಯಗಳ ಪ್ರಮುಖ ಸುದ್ದಿಗಳನ್ನು ಜನರಿಗೆ ನೀಡುವುದರೊಂದಿಗೆ ಕರಾವಳಿಯಲ್ಲಿ ನಡೆಯುವ ಅತೀ ಸಣ್ಣ ಬೆಳವಣಿಗೆಯನ್ನೂ ವೀಕ್ಷಕರ ಮುಂದಿಡುವ ಕಾರ್ಯ ನಮ್ಮಿಂದ ಆಗಲಿದೆ. ಕರಾವಳಿ ಜಿಲ್ಲೆಗಳು ಎದುರುಸುತ್ತಿರುವ ಅವ್ಯಕ್ತ ಆತಂಕ, ಅಸಹನೆಗಳಿಗೆ ಮುಂದಿನ ದಿನಗಳಲ್ಲಿ ನಾವು ವೇದಿಕೆಯಾಗಲ್ಲಿದ್ದೇವೆ. ಕಡಲತಡಿಯ ಬದುಕಿನ ಹಲವು ಮುಖಗಳನ್ನು ಒಂದು ಬಿಂಬದಲ್ಲಿ ಬಂಧಿಸುವ ನಮ್ಮ ಪುಟ್ಟ ಪ್ರಯತ್ನವೇ “ಮುಕ್ತ ಟಿವಿ”.
ಕನ್ನಡದ ಗಡಿ ಕಾಸರಗೋಡು ಜಿಲ್ಲೆಯಿಂದ ಉತ್ತರ ಕನ್ನಡದ ಗಡಿಯವರೆಗೆ ನಮ್ಮ ವೀಕ್ಷಕ ಜಾಲ ಹರಡಿಕೊಳ್ಳುತ್ತದೆ. ಸಪರಸುಮಾರು ನಾಲ್ಕು ಲಕ್ಷ ಜನರನ್ನು ತಲುಪುವ ನಿರೀಕ್ಷೆ ನಮ್ಮದು.
ಕರಾವಳಿ ಕಲೆಗಳ ಆಗರವಿದು. ಹಲವಾರು ಭಾಷೆ ಸಂಸ್ಕೃತಿಯ ತವರಿದು. ನಾಟಕ ಯಕ್ಷಗಾನ ಇಲ್ಲಿಯ ಜೀವಾಳ. ಶತಮಾನಗಳ ಇತಿಹಾಸವಿರುವ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. 1971 ಫೆ.19 ತುಳು ಚಿತ್ರರಂಗ ಭೂಮಿ ಉದಯವಾಗಿ ತದನಂತರ ಹಲವಾರು ವರ್ಷಗಳಿಂದ ಸಾಮಾಜಿಕ, ಚಾರಿತ್ರಿಕ, ಹಾಸ್ಯಮಯ ಚಿತ್ರಗಳನ್ನು ನೀಡುತ್ತಾ ಬಂದಿದೆ. ನೂರಾರು ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ತುಳು ಚಿತ್ರರಂಗದಲ್ಲಿ ಮೂಡಿಬಂದಿದ್ದಾರೆ. ತುಳು ಚಿತ್ರರಂಗಕ್ಕೆ 45 ವರ್ಷಗಳು ತುಂಬಿದೆ. ಕರಾವಳಿಯ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನವುಂಟುಮಾಡುತ್ತಿರುವ “ಮುಕ್ತ ವಾಹಿನಿ” ಲೋಕಾರ್ಪಣೆಯಾಗುವ ಸಂಧರ್ಭ ತುಳು ಚಿತ್ರರಂಗದ ಸಿಂಹಾವಲೋಕನದೊಂದಿಗೆ, ಚಿತ್ರರಂಗ ಸಾಗಿಬಂದ ಹಾದಿಯನ್ನು ನೆನೆಯುತ್ತಾ, ತುಳು ಸಿನೆಮಾ 2016ರಲ್ಲಿ ಯಶಸ್ಸಿನ ಪಯಣದತ್ತ ಸಾಗಲು ಪ್ರೇರಕರಾದ ಸಾಧಕರ ಸಾಧನೆಯನ್ನು ಸ್ಮರಿಸುವ ಅದ್ಭುತ ಕಾರ್ಯಕ್ರಮ
” ಮುಕ್ತ ತುಳು ಫಿಲ್ಮ್ ಆವಾರ್ಡ್ 2016 “
ಕಡಲ ಅಲೆಯ ತಂಪು ತಂಗಾಳಿಗೆ ಮುಖವೊಡ್ಡಿ ನೇಸರನ ರಂಗಿನೋಕುಳಿಯಲ್ಲಿ ಮಿಂದೇಳುತ್ತಾ “ಜನವರಿ 29” ರಂದು ಸಂಜೆ 4.00 ರಿಂದ “ಮಲ್ಪೆ ಕಡಲ ಕಿನಾರೆಯಲ್ಲಿ” ಈ ಸಂಭ್ರಮ ನಿಮ್ಮೊಂದಿಗೆ…ಬನ್ನಿ ಈ ಸಂಭ್ರಮದಲ್ಲಿ ನಮ್ಮೊಂದಿಗೆ ಜೊತೆಯಾಗಿ…
ಈ ಕಾರ್ಯಕ್ರಮದ ರೇಡಿಯೋ ಪಾಲುದಾರರಾಗಿ ‘92.7 ಬಿಗ್.ಎಫ್ಎಂ’ ಹಾಗೂ ‘ನ್ಯೂಸ್ ಕರ್ನಾಟಕ.com’ ಮತ್ತು ‘ನ್ಯೂಸ್ ಕನ್ನಡ.com’ ವೆಬ್ ಪಾಲುದಾರರಾಗಿ ಈ ಸಂಭ್ರಮದಲ್ಲಿ ಸಹಕರಿಸಲಿದೆ.