ಕಾರ್ಕಳ: ನೆರೆಮನೆಯವರೊಂದಿಗೆ ಅನ್ಯೋನ್ಯ ಸಂಬಂಧ ಇಟ್ಟು ಕೊಂಡು ಬೀಗದ ಕೈ ಪಡೆದು ಕವಾಟಿನಲ್ಲಿದ್ದ 30 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಬ್ಬರಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು ಪ್ರಮುಖ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.
ಕಾರ್ಕಳ ನಗರದ ಪೆರ್ವಾಜೆಯ ರೋಹಿತ್ ಶೆಟ್ಟಿ ಪ್ರಕರಣದ ಒಂದನೇ ಆರೋಪಿಯಾಗಿದ್ದು ವಿಚಾರಣೆಯಲ್ಲಿ ನಿರ್ದೋಷಿಯಾಗಿದ್ದಾನೆ. ಸಾಲ್ಮರ್ ನವೀದ್ ಕಾಂಪ್ಲೆಕ್ಸ್ ಬಳಿಯ ನಿವಾಸಿ ಲತಾ ಎಂ. ಶೆಟ್ಟಿ, ಎಸ್.ಬಿ.ಕಾಲೇಜು ಸಮೀಪದ ಇಂಡಸ್ಟ್ರೀಸ್ ಎರಿಯಾದ ನಿವಾಸಿ ದೇವಾನಂದ ಶಿಕ್ಷೆಗೆ ಗುರಿಯಾದವರು. 2012 ಮೇ 15ರಿಂದ 2013 ಜೂನ್ 29ರ ನಡುವೆ ಈ ಘಟನೆಯೂ ನಗರದ ಸಾಲ್ಮರ್ ನವೀದ್ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಈ ಕುರಿತು ಅಬ್ದುಲ್ ಖಾದರ್ ಎಂಬವರ ಪತ್ನಿ ಮುನಾವರ್ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದರು.
ಪತಿ, ಮಕ್ಕಳಾದ ಮನಾಲ್, ಮೆಹರಾನ್, ನಿಲೋಫರ್ ಎಂಬವರರೊಂದಿಗೆ ಬ್ಯಾರಿನ್ ನಲ್ಲಿ ವಾಸವಾಗಿದ್ದ ಮುನಾವರ್ ಘಟನೆಯ ಎರಡು ವರ್ಷಗಳ ಮುನ್ನಾ ಸಾಲ್ಮರ್ನ ಆಬಿದ್ ಹಸನ್ ಎಂಬವರ ಪ್ಲಾಟನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ವಾಸಮಾಡಿಕೊಂಡಿದ್ದರು. ನೆರೆಮನೆಯ ಲತಾ ಎಂ.ಶೆಟ್ಟಿ ಎಂಬವರು ಅನ್ಯೋನ್ಯವಾಗಿದ್ದರು. ಅದೇ ಕಾರಣದಿಂದಾಗಿ 2012 ಮೇ 15ರಂದು ಮರಳಿ ಬ್ಯಾರಿನ್ ಹೋಗುವಾಗ ಮನೆಯ ಕೀಯನ್ನು ಲತಾ ಎಂ.ಶೆಟ್ಟಿ ಅವರಿಗೆ ನೀಡಿ ಮನೆಯ ಕ್ಲೀನಿಂಗ್ ಮಾಡುವಂತೆ ತಿಳಿಸಿ ಹೋಗಿದ್ದರು. 2013 ಜೂನ್ 29ರಂದು ಮುನಾವರ್ ಕಾರ್ಕಳಕ್ಕೆ ಹಿಂತಿರುಗಿದ್ದಾಗ ಲತಾ ಎಂ.ಶೆಟ್ಟಿಯ ಮನೆಗೆ ಬೀಗ ಹಾಕಿತ್ತು. ಮನೆಯ ಬೀಗ ತೆಗೆಯಲು ಕೀ ಇಲ್ಲದೇ ಇರುವಾಗ ಲತಾ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಲತಾಳ ಮನೆಗೆ ಬರುತ್ತಿದ್ದ ಆಕೆಯ ಸಂಬಂಧಿ ಪೆರ್ವಾಜೆಯ ರೋಹಿತ್ ಎಂಬವನಿಗೆ ಕರೆ ಮಾಡಿ ವಿಚಾರಿಸಿದಾಗ ಮನೆಗೆ ಕೀ ದೇವಾನಂದನಲ್ಲಿ ಇರುವ ವಿಚಾರ ತಿಳಿದುಬಂತು. ಸ್ವಲ್ಪ ಹೊತ್ತಿನಲ್ಲಿಯೇ ಮನೆಯ ಕೀಯನ್ನು ರೋಹಿತ್ ಶೆಟ್ಟಿ ತಂದು ಒಪ್ಪಿಸಿದ್ದನು.
ಮುನಾವರ್ ತನ್ನ ತಂಗಿಯ ಸಮ್ಮಖದಲ್ಲಿ ಮನೆಯ ಬೀಗ ತೆರೆದು ಒಳ ಹೋಗಿ ನೋಡಿದರೆ ಕಪಾಟಿನ ಬೀಗ ಮುರಿದಿತ್ತು. ಲಾಕರ್ ನಲ್ಲಿ ಇಡಲಾಗಿದ್ದ ಮೂವತ್ತು ಲಕ್ಷ ಮೌಲ್ಯದಚಿನ್ನಾಭರಣಗಳೂ ಬೆಲೆಬಾಳುವ ವಾಚ್, ಮೊಬೈಲ್ ಸೆಟ್ ಗಳು, ನಗದು ಸಹಿತ ಒಟ್ಟು ನಲ್ವತ್ತು ಲಕ್ಷ ಸೊತ್ತುಗಳು ಕಳವುಗೈದಿರುವ ಅಂಶ ಬೆಳಕಿಗೆ ಬಂದಿತು. ಪ್ರಕರಣದ ಬಗ್ಗೆ ಅಂದಿನ ನಗರ ಠಾಣಾಧಿಕಾರಿ ಪ್ರಮೋದ್ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿತರು ನಗರದ ಮುತ್ತೊಟ್ಟು ಫೈನಾಸ್ಸ್ ಹಾಗೂ ಫೆಡ್ ಬ್ಯಾಂಕ್ ನಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ವೆಲೇರಿಯನ್ ಡಿಸೋಜಾ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಪರ ಎಪಿಪಿ ಶೋಭಾ ಎಂ.ನಾಯ್ಕ ಹಾಗೂ ಸಹಾಯಕ ಎಪಿಪಿ ಜಗದೀಶ್.ಕೆ.ಜಾಲಿ ವಾದಿಸಿದ್ದರು.
ನ್ಯಾಯಾಧೀಶ ರಮೇಶ್ ಮಹಾಜನ ಅಪ್ಪಾಸಾಬ್ ಪ್ರಕರಣದ ತೀಪರ್ು ನೀಡಿ ಒಂದನೇ ಆರೋಪಿ ಪೆವರ್ಾಜೆ ರೋಹಿತ್ ಶೆಟ್ಟಿ ನಿರ್ದೋಷಿಯಾಗಿದ್ದು, ಉಳಿದ ಇಬ್ಬರು ಲತಾ ಎಂ.ಶೆಟ್ಟಿ, ದೇವಾನಂದ ದೋಷಿಗಳೆಂದು ತೀಪರ್ು ನೀಡಿದ್ದಾರೆ. ಅಪರಾಧಿಗಳಿಗೆ 2ವರ್ಷ ಸಾದಾ ಸಜೆ ಹಾಗೂ 4 ಸಾವಿರ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳುಗಳ ಹೆಚ್ಚುವರಿ ಸಾದಾ ಸಜೆ ವಿಧಿಸಿದ್ದಾರೆ.