ಕಾಸರಗೋಡು: ಮುಳ್ಳೇರಿಯದಲ್ಲಿ ಜನವಾಸ ಕೇಂದ್ರದಲ್ಲಿ ಮದ್ಯದಂಗಡಿ ತೆರೆಯುವ ಯತ್ನವನ್ನು ನಾಗರಿಕರು ತಡೆದಿದ್ದು, ಬುಧವಾರ ಬೆಳಿಗ್ಗೆಯಿಂದ ಸಂಜೆ ತನಕ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿಯನ್ನು ಮುಳ್ಳೇರಿಯ ಗಾಡಿಗುಡ್ಡೆ ಬೇಂಗತ್ತಡ್ಕದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಮಂಗಳವಾರ ರಾತ್ರಿ ಮದ್ಯವನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಬುಧವಾರ ಬೆಳಿಗ್ಗೆ ಮದ್ಯದಂಗಡಿ ತೆರೆಯಬೇಕಿತ್ತು. ಈ ನಡುವೆ ನೂರಾರು ನಾಗರಿಕರು ಸ್ಥಳಕ್ಕೆ ತಲಪಿ ಪ್ರತಿಭಟನೆ ನಡೆಸಿದರು.
ಸಮೀಪ ಶಾಲೆ ಹಾಗೂ ಹಲವಾರು ಮನೆಗಳಿದ್ದು ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದು ಎಂದು ನಾಗರಿಕರು ಒತ್ತಾಯಿಸಿದ್ಫಾರೆ.
ಅಗತ್ಯಬಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ನಾಗರಿಕರು ಮುನ್ನೆಚ್ಚರಿಕೆ ನೀಡಿದ್ದಾರೆ.