ಮಂಗಳೂರು: ತೋಟಗಾರಿಕ ಇಲಾಖೆ ಹಾಗೂ ಜಿಲ್ಲಾ ಆಡಳಿತ ಮತ್ತು ಸಿರಿ ತೋಟಗಾರಿಕೆ ಅಸೋಸಿಯೇಷನ್ ಆಯೋಜಿಸಿದ ನಾಲ್ಕು ದಿನದ ಫಲ, ಪುಷ್ಪ ಪ್ರದರ್ಶನವನ್ನು ಪರಿಸರ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ ರಾಮನಾಥ ರೈ ಅವರು ಕದ್ರಿಯಲ್ಲಿ ಗುರುವಾರದಂದು ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಮಾತಾಡಿದ ಇವರು ಈ ಕಾರ್ಯಕ್ರಮ ಪ್ರತಿ ವರ್ಷ ತೋಟಗಾರಿಕೆ ಇಲಾಖೆಯಿಂದ ನಡೆಯುತ್ತಾ ಬರುತ್ತಿದ್ದು, ತೋಟಗಾರಿಕೆ ಸಂಬಂಧ ಪಟ್ಟ ಉಪಕರಣಗಳು ಪರಿಸರ ಕಡೆಗೆ ಕಾಳಜಿ ತೋರಿಸಲು ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ತುಂಬಾ ಉಪಕಾರಿಯಾಗಿದೆ ಎಂದರು.
ಸುಮಾರು 80 ಮಳಿಗೆಗಳು ಜನರಿಗೆ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಲಿದ್ದು, ಮಳಿಗೆಗಳು ಸಸ್ಯಗಳ ಮಾರಾಟ ಮಳಿಗೆಗಳು ಜೊತೆಗೆ ನರ್ಸರಿಗಳು, ತೋಟಗಾರಿಕೆಯ ಮತ್ತು ಸಾವಯವ ಉತ್ಪನ್ನಗಳನ್ನು ಮಾರಾಟ. ಆಹಾರ ಹಬ್ಬ, ಆಹಾರ ಮೇಳಾ ಪ್ರದರ್ಶನ ಸಮಯದಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ ಉಳ್ಳಾಲದ ಯೋಧ ರಾಣಿ ಅಬ್ಬಕ್ಕ ಒಂದು ಆಕ್ರತಿ ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಆಕರ್ಷಣೆಯಾಗಿದ್ದು, ಇದನ್ನು ಗುಲಾಬಿ ಮತ್ತು ಕ್ರಿಸಾಂತಮಮ್ಸ್ ಹೂಗಳನ್ನು ಜೋಡಿಸಿ ಮಾಡಲಾಗಿದ್ದು, ಇದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಗೋಂಡೆ ಹೂ, ಆಂತರಿಯಂ, ದಹೀಲಾ, ಜರ್ಬೆರಾ, ಆರ್ಕಿಡ್ ಗಳು ಮತ್ತು ಇತರ ಗಿಡಗಳು ಪ್ರದರ್ಶನಕ್ಕೆ ಇಡಲಾಗಿದೆ. ಒಂದು ದಿನದ ಹೂವಿನ ಜೋಡಣೆ ಸ್ಪರ್ಧೆ ಸಹ ನಡೆಯಲಿದ್ದು, ಸಾರ್ವಜನಿಕರಿಗೆ ಭಾಗವಹಿಸಲು ಉಚಿತವಾಗಿದೆ. ಸುಮಾರು 80 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 10 ಸರ್ಕಾರದ ಮಳಿಗೆಗಳು ಜನರಿಗೆ ಕೃಷಿಗೆ ಸಂಬಂಧ ಪಟ್ಟ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಲಿದೆ. ಮಾತ್ರವಲ್ಲದೆ ಆಹಾರ ಹಬ್ಬ “ಆಹಾರಮೇಳ” ಈ ಪ್ರದರ್ಶನ ಸಮಯದಲ್ಲಿ ಆಯೋಜಿಸಲಾಗಿದೆ.
ಎಮ್.ಎಲ್.ಎ, ಜೆ. ಆರ್ ಲೋಬೋ, ಎಮ್.ಎಲ್.ಎ ಮೊದೀನ್ ಭಾವಾ, ಮೇಯರ್ ಹರಿನಾಥ್, ಐವನ್ ಡಿಸೋಜ್ಹಾ, ಕಾರ್ಪೊರೇಟರ್ ಕವಿತಾ ಸನಿಲ್ ಮತ್ತಿತ್ತರ ಗಣ್ಯರು ಉಪಸ್ಥಿತರಿದಸ್ದರು.