ಉಳ್ಳಾಲ: 68ನೇ ಗಣರಾಜ್ಯೋತ್ಸವದ ಅಂಗವಾಗಿ ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ದ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ರಶೀದ್ ಹಾಜಿಯವರು ಪ್ರವಾದಿ ಸ.ಅ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ರವರು ನಮಗೆ ನೈಜವಾದಂತಹ ಸಂವಿದಾನವನ್ನು ಕಲಿಸಿಕೊಟ್ಟಿದ್ದಾರೆ ಅದನ್ನು ಪಾಲಿಸುವವನೇ ನೈಜ ಮುಸ್ಲಿಮ್, ನಾವು ಸಂವಿದಾನಕ್ಕೆ ಗೌರವಿಸಬೇಕು ಮತ್ತು ಅದನ್ನು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಅರಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಬಾವ ಫಕೀರ್ ಸಾಬ್, ಅಬ್ದುಲ್ ರಹ್ಮಾನ್ ಅದ್ದ, ಹಮ್ಮಬ್ಬ ಯು.ಕೆ, ಜಬ್ಬಾರ್ ಮೇಲಂಗಡಿ, ಅಶ್ರಫ್ ಮುಕ್ಕಚ್ಚೇರಿ, ಹಸನ್ ಕೈಕೊ, ಹಮೀದ್ ಕೋಡಿ, ಮೊಯ್ದಿನಬ್ಬ ಉಳ್ಳಾಲ ಬೈಲ್, ದರ್ಗಾ ಮೆನೆಜರ್ ಯು.ಎಮ್ ಯೂಸುಫ್ ಕಾರ್ಯ ನಿರ್ವಹಣಾಧಿಕಾರಿ ಸಯ್ಯಿದ್ ಶಿಹಾಬ್, ಶಾಲಾ ಕಾಲೇಜು ಆಡಳಿತಾಧಿಕಾರಿ ಹಾಜಿ ಅಬ್ದುಲ್ ಲತೀಫ್ ದಅವಾ ಕಾಲೇಜು ಪ್ರಾಂಶುಪಾಲ ಇಬ್ರಾಹೀಮ್ ಅಹ್ಸನಿ, ಹಿಫ್ಲುಲ್ ಕುರಾನ್ ಕಾಲೇಜು ಪ್ರಾಂಶುಪಾಲ ಹಾಫಿಲ್ ಅಬ್ದುಲ್ ರಹ್ಮಾನ್ ಸಖಾಫಿ, ಹಝ್ರತ್ ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಇಮ್ತಿಯಾಝ್ ಮತ್ತು ಹಿಫ್ಲ್, ದಅವಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಊರಿನ ನಾಗರಿಕರು ಉಪಸ್ಥಿತರಿದ್ದರು.