ಸುಳ್ಯ: ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಅಥವಾ ಜಲ ಅಪಘಾತಗಳು ಉಂಟಾದರೆ ರಕ್ಷಣಾ ಕಾರ್ಯಕ್ಕಿಳಿಯುವ ಆರು ಮಂದಿ ಮುಳುಗು ತಜ್ಞರ ತಂಡವನ್ನು ಸುಳ್ಯದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ತಂಡದ ಸದಸ್ಯರಾದ ಮಹಮ್ಮದ್ ಬಶೀರ್, ಅಬ್ದುಲ್, ಶೇಖಾಲಿ, ಸೈಯ್ಯದ್, ಅಬ್ಬಾಸ್ ಮತ್ತು ಲತೀಫ್ರನ್ನು ಸನ್ಮಾನಿಸಲಾಯಿತು. ನೀರಿನಲ್ಲಿ ರಕ್ಷಣಾ ಕಾರ್ಯ ನಡೆಸುವ ಸಂದರ್ಭದಲ್ಲಿ ಉಪಯೋಗಿಸುವ ಆಕ್ಸಿಜನ್ ಕಿಟ್ ವ್ಯವಸ್ಥೆಯನ್ನು ಒದಗಿಸಿಕೊಡಬೇಕೆಂದು ತಂಡದ ಸದಸ್ಯರು ಸಮಾರಂಭದಲ್ಲಿ ಬೇಡಿಕೆಯಿಟ್ಟರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಿ ಅಗ್ನಿಶಾಮಕ ಠಾಣೆಗೆ ಆಕ್ಸಿಜನ್ ಕಿಟ್ ಒದಗಿಸಲಾಗುವುದು. ಅದನ್ನು ರಕ್ಷಣಾ ಸಮಯದಲ್ಲಿ ತಂಡ ಬಳಸಿಕೊಳ್ಳಬಹುದು ಎಂದು ಶಾಸಕ ಎಸ್.ಅಂಗಾರ ಸಭೆಯಲ್ಲಿ ಭರವಸೆ ನೀಡಿದರು.