ಬೆಳ್ತಂಗಡಿ: ಹಿಂದು ಸಂಘಟನೆಗಳ ಕಾರ್ಯಕರ್ತರು ಸರ್ಜಿಕಲ್ ದಾಳಿ ನಡೆಸಿ ಅರಣ್ಯದಲ್ಲಿ ಅಕ್ರಮ ಕಸಾಯಿಖಾನೆಯನ್ನು ಪತ್ತೆ ಹಚ್ಚಿ ಪೋಲಿಸರಿಗೆ ಮಾಹಿತಿ ನೀಡಿದ ಘಟನೆ ರೆಖ್ಯಾ ಗ್ರಾಮದಲ್ಲಿ ನಡೆದಿದೆ. ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.
ರೆಖ್ಯಾ ಗ್ರಾಮದ ಕಾಯರ್ತೋಡಿ ಸರಕಾರಿ ಅರಣ್ಯದ ವ್ಯಾಪ್ತಿಯೊಳಗೆ ದನವನ್ನು ಹತ್ಯೆ ಮಾಡಿ ಮಾಂಸವನ್ನು ಹದಮಾಡಲಾಗುತ್ತಿತ್ತು. ಇದನ್ನು ರೆಖ್ಯಾ, ಅರಸಿನಮಕ್ಕಿ, ಶಿಶಿಲ ಭಾಗದ ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿದ್ದರು. ಬಳಿಕ ಪೋಲಿಸರು ದಾಳಿ ದಾಳಿ ಮಾಡಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಗಬ್ಬದ ದನವೊಂದನ್ನು ಹತ್ಯೆ ಮಾಡಿ ಸ್ಥಳದಲ್ಲೇ ದನದ ಮಾಂಸದ ಅರ್ಧ ಭಾಗದಷ್ಟು ಹದ ಮಾಡುತ್ತಿದ್ದುದು ಕಂಡು ಬಂದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ದನದ ಮಾಂಸ, ಚರ್ಮ, ತಲೆಬುರುಡೆಗಳು ಪತ್ತೆಯಾಗಿವೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ಸಾವ್ಯ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಅಕ್ರಮವಾಗಿ ಗೋ ಸಾಗಿಸುತ್ತಿರುವುದನ್ನು ಸಾವ್ಯ ಪೆರಾಡಿ ಬಜರಂಗ ದಳದ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಬಳಿಕ ಅದನ್ನು ಪೋಲಿಸರಿಗೊಪ್ಪಿಸಿದ್ದಾರೆ.