ಕಾರ್ಕಳ: ಸಂತ ಲಾರೆನ್ಸ್ ಅವರು ತನ್ನ ಜೀವಿತಾವಧಿಯಲ್ಲಿ ತನ್ನಲ್ಲಿದ್ದ ಆಸ್ತಿ, ನಗ-ನಗದನ್ನು ಬಡ-ಬಗ್ಗರಿಗೆ ಹಂಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಅದರ ಮುಂದುವರಿದ ಭಾಗವಾಗಿ ಅತ್ತೂರು ಬಸಿಲಿಕದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಗ್ರಹವಾಗಿರುವ ಭಿಕ್ಷಾನಿಧಿಯನ್ನು ಹಂಚುವ ಸಂಪ್ರದಾಯವನ್ನು ಚಾಚು ತಪ್ಪದೇ ಮುಂದುವರಿಸಿಕೊಂಡು ಬಂದಿರುವುದಾಗಿ ಚರ್ಚ್ ನ ಚುನಾಯಿತ ಉಪಾಧ್ಯಕ್ಷ ಸಾಣೂರು ಜಾನ್ ಡಿಸಿಲ್ವ ಹೇಳಿದರು.
ಶುಕ್ರವಾರ ಮಧ್ಯಾಹ್ನ ವೇಳೆಗೆ ಬಸಿಲಿದ ಮುಂಭಾಗ ಭಿಕ್ಷಾನಿಧಿ ಹಂಚುವ ಮುನ್ನಾ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಬಸಿಲಿಕ ಎಂದು ಘೋಷಣೆಯಾದ ಬಳಿಕ ನಡೆದ ಪ್ರಪ್ರಥಮ ವಾರ್ಷಿಕೋತ್ಸವ ಇದಾಗಿದೆ. ನಿರೀಕ್ಷೆಗಿಂತ ಮೀರಿ ಸುಮಾರು 10 ಲಕ್ಷ ಭಕ್ತಾದಿಗಳು ಜಾತಿ-ಧರ್ಮ-ಭಾಷೆ ಇವೆಲ್ಲವನ್ನು ಎಲ್ಲೆಮೀರಿ ದೇವರ ದರ್ಶನ ಪಡೆದಿದ್ದಾರೆ. ವಾರ್ಷಿಕೋತ್ಸವ ಸಂದರ್ಭದಲ್ಲಿ ಚರ್ಚ್ ನ ಪರಿಸರದಲ್ಲಿ ಭಿಕ್ಷಾಟನೆ ನಡೆಯುತ್ತಾ ಬಂದಿತು. ಇದರಿಂದ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಅಂದಿನ ಎಎಸ್ಪಿ ಪ್ರತಾಪ್ ರೆಡ್ಡಿ ಅವರು ಚರ್ಚ್ನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಫಲವಾಗಿ ಚರ್ಚ್ ಪರಿಸರದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇದಿಸಿತು. ಪರಿಣಾಮವಾಗಿ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾಲ್ಕು ಕಡೆಗಳಲ್ಲಿ ಭಿಕ್ಷನಿಧಿ ಸಂಗ್ರಹಕ್ಕಾಗಿ ಕಾಣಿಕೆ ಡಬ್ಬಿಗಳನ್ನು ಇಡುವಂತಹ ಸಂಪ್ರದಾಯವನ್ನು ಬದಲಾಯಿಸಿಕೊಳ್ಳಲಾಯಿತು.
10ಲಕ್ಷದ 32 ಸಾವಿರ ಸಂಗ್ರಹ
ಭಿಕ್ಷನಿಧಿ ಸಂಗ್ರಹದ ಡಬ್ಬಿಯಲ್ಲಿ 10 ಲಕ್ಷದ 32 ಸಾವಿರ ನಗದು ದಾನ ರೂಪದಲ್ಲಿ ಸಂಗ್ರಹವಾಗಿದೆ. 300 ಚೀಲವನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಮಧ್ಯಾಹ್ನ ಊಟವನ್ನು ಪ್ಯಾಕ್ನ್ನು ತಯಾರಿಸಲಾಗಿದೆ. ದೈಹಿಕವಾಗಿ ಅತೀ ಹೆಚ್ಚು ಪ್ರಮಾಣದಲ್ಲಿ ಅಂಗ ಊನ ಹೊಂದಿರುವಂತಹ ವ್ಯಕ್ತಿಗಳಿಗೆ 300 ರೂ. ಯುಳ್ಳ 5 ಚೀಲಗಳನ್ನು ನೀಡಲಾಗುತ್ತಿದೆ. ದೈಹಿಕ ಅನಾರೋಗ್ಯ ಪೀಡಿತ ವ್ಯಕ್ತಿಯ ಅವರ ಅನುಗುಣವಾಗಿ ನಗದು ಚೀಲವನ್ನು ಹಾಗೂ ಪ್ರತಿಯೊಂದು ಮಹಿಳೆಗೂ 300 ರೂ. ಚೀಲವನ್ನು ವಿತರಿಸನೀಡಲಾಗುತ್ತಿದೆ. ವಿಶೇಷವಾಗಿ 14 ವರ್ಷ ಒಳಗಿನ ಮಕ್ಕಳಿಗೆ ಭಿಕ್ಷ ನಗದು ಚೀಲನ್ನು ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕಾನೂನು ಹಿತ ದೃಷ್ಠಿಯನ್ನು ಕಾಪಾಡುವುದು ಅಷ್ಟೇ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ಬಸಿಲಿಕದ ಸಹಾಯಕ ಧರ್ಮಗುರು ಫಾದರ್. ವಿಜಯ್ ಡಿಸೋಜಾ ಅವರು ಭಿಕ್ಷಾದಾನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಲನ ಸಮಿತಿಯ ಪದಾಧಿಕಾರಿಗಳು, ಚರ್ಚ್ ಆಡಳಿತ ಮಂಡಳಿಯ ಪ್ರಮುಖರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೃಢಕಾಯಕರು ಭಿಕ್ಷೆಗಾಗಿ ನಿಂತರು
ಧೃಢಕಾಯ ದೇಹದ ಬಹುತೇಕ ಮಂದಿ ಭಿಕ್ಷೆ ರೂಪದ ಹಣಕ್ಕಾಗಿ ಬೆಳಿಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಭಿಕ್ಷದಾನ ಹಂಚಲು ಆರಂಭವಾಗುತ್ತಿದ್ದಂತೆ ನೂಕುನುಗ್ಗಲು ಏಕಾಏಕಿ ಶುರುವಾಗಿತ್ತು. ಅದಕ್ಕೆಲ್ಲ ದೃಢಕಾಯಕರ ಕಾರಣರು ಎಂಬುವುದು ಮೇಲ್ನೋಟಕ್ಕೆ ಕಂಡು ಬಂತು. ಅಂತವರನ್ನು ಗಮನಿಸಿ ಕೆಲವನ್ನು ಹೊರ ಕಳುಹಿಸಿದ ಘಟನಾವಳಿಯು ನಡೆದಿದೆ.
ಭಿಕ್ಷಾನಿಧಿ ಹಂಚುವ ಪರಿಪಾಠದಲ್ಲಿ ಬದಲಾವಣಿಗೆ ಚಿಂತನೆ
ಭಿಕ್ಷಾನಿಧಿ ಪಡೆದ ಬಹುತೇಕ ಮಂದಿ ಕಾರ್ಕಳ ಪರಿಸರದ ಮದ್ಯದಂಗಡಿಯಲ್ಲಿ ಕಂಡು ಬಂದಿದ್ದರು. ಇದು ಬಸಿಲಿಕ ಚರ್ಚ್ ನ ಆಡಳಿತ ಮಂಡಳಿಯವರಿಗೂ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಮುಂದಿನ ವರ್ಷಾವಧಿಯಲ್ಲಿ ಇದರ ಬಗ್ಗೆ ಒಂದಿಷ್ಟು ಮಾರ್ಪಾಡು ಮಾಡುವ ಚಿಂತನೆಯಲ್ಲಿ ಆಡಳಿತ ಮಂಡಳಿ ಚಿಂತನೆ ನಡೆಸಿದ್ದಾರೆಂಬ ಮಾಹಿತಿ ಲಭಿಸಿದೆ.