ಪುತ್ತೂರು: ಇಲ್ಲಿನ ದೇವಸ್ಯ ಸಮೀಪ ಬಸ್ಸು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂಭತ್ತು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ.
ಒಳಮೊಗರು ನಿವಾಸಿ ವಿಠಲ ರೈಯವರ ಪುತ್ರಿ ವಿಣಾ(14.ವ), ಬೆಟ್ಟಂಪಾಡಿ ದಿ. ಕಿಟ್ಟಣ್ಣರವರ ಪುತ್ರ ಶಶಿಧರ(40.ವ), ಇರ್ದೆ ನಿವಾಸಿ ದೇವಣ್ಣ ನಾಯ್ಕರವರ ಪತ್ನಿ ಶ್ಯಾಮಲ(35.ವ), ಅಜ್ಜಿಕಲ್ಲು ನಿವಾಸಿ ಗೋಪಾಲ ನಾಯ್ಕರವರ ಪುತ್ರಿ ದೀಪಶ್ರೀ (14ವ.), ಪೆರ್ಲ ನಿವಾಸಿ ರವಿಚಂದ್ರರವರ ಪತ್ನಿ ಸೌಮ್ಯ (20.ವ), ರಾಧಾಕೃಷ್ಣರವರ ಪುತ್ರಿ ಜಯಲಕ್ಷ್ಮಿ(15.ವ), ಬೆಟ್ಟಂಪಾಡಿ ನಿವಾಸಿ ಮೊಹಮ್ಮದ್ ಹನೀರವರ ಪತ್ನಿ ಜೈನಾಬಿ(50.ವ), ಅಜ್ಜಿಕಲ್ಲು ನಿವಾಸಿ ಕೃಷ್ಣಪ್ರಸಾದ್ ರವರ ಪುತ್ರಿ ಪೃಥ್ವಿ(22.ವ) ಹಾಗು ನಿರ್ಮಲ ಗಾಯಗೊಂಡವರು.
ಈ ಪೈಕಿ ಇಬ್ಬರು ಗಾಯಾಳುಗಳು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಬಸ್ಸಿನಲ್ಲಿ ಸುಮಾರು 35ಮಂದಿ ಪ್ರಯಾಣಿಕರಿದ್ದು ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೃಥ್ವಿಯವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.