ಕಾಸರಗೋಡು: ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕ ಯುಕ್ತ ಗುಳಿಗೆ ( ಮಾತ್ರೆ )ಯನ್ನು ಮಾರಾಟ ಮಾಡುತ್ತಿದ್ದ ಮಂಗಳೂರಿನ ಯುವಕನೋರ್ವನನ್ನು ಕಾಸರಗೋಡು ರೈಲು ನಿಲ್ದಾಣದಿಂದ ಬಂಧಿಸಲಾಗಿದೆ.
ಬಂಧಿತನನ್ನು ಮಂಗಲರು ಬೆಂಗರೆಯ ಮುಹಮ್ಮದ್ ಝಕೀರ್ ( 22) ಎಂದು ಗುರುತಿಸಲಾಗಿದೆ. ಮಂಗಳೂರು – ತಿರುವನಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕಾಸರಗೋಡು ರೈಲಿ ನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಅಬಕಾರಿ ದಳ ಮತ್ತು ರೈಲ್ವೆ ಭದ್ರತಾ ಪಡೆ ಸಿಬಂದಿಗಳು ಬಂಧಿಸಿದರು. ಈತ ಕಾಸರಗೋಡಿನ ಹಲವು ಶಾಲೆ ಮತ್ತು ಯುವಕರನ್ನು ಕೇಂದ್ರೀಕರಿಸಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದನು. ಕೇರಳದಲ್ಲಿ ನಿಷೇಧಿಸಿದ ನೈಟ್ರೊ ವೈಟ್ ,ನೈಟ್ರೊ ನೈಥ೦ ಮಾತ್ರೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಮಾತ್ರೆಗೆ 200 ರೂ. ವಸೂಲು ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.