ಕಾಸರಗೋಡು: ಉಪ್ಪಳ ಸಮೀಪದ ಬಾಯಾರಿನಲ್ಲಿ ಚಿನ್ನಾಭರಣ ವ್ಯಾಪಾರಿಯನ್ನು ಕೊಲೆಗೈದು ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ತಮಿಳುನಾಡು ಪುದುಕೋಟೆಯ ಮುಹಮ್ಮದ್ ಅಶ್ರಫ್ ( 42) ಎಂದು ಗುರುತಿಸಲಾಗಿದೆ. ಕಾಸರಗೋಡಿನಲ್ಲಿ ಆಟೋ ಚಾಲಕನಾಗಿದ್ದ ಈತ ಮತ್ತು ಕನ್ಯಾನ ಮಿತ್ತನಡ್ಕದ ಅಬ್ದುಲ್ ಸಲಾಂ ಸೇರಿ ಕಾಸರಗೋಡು ವಿದ್ಯಾನಗರ ದ ಮುಹಮ್ಮದ್ ಮನ್ಸೂರ್ ನನ್ನು ಕೊಲೆಗೈದು ಪಾಲು ಬಾವಿಗೆ ಎಸೆದಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬ್ದುಲ್ ಸಲಾಂನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಜನವರಿ 25 ರಂದು ಸಂಜೆ ಕೃತ್ಯ ನಡೆದಿತ್ತು.
ವ್ಯಾಪಾರಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.