ಚಿಕ್ಕಮಗಳೂರು: ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಯ್ತು ಅಂದ್ರೆ ಸಾಕು ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ತಲೆ ಎತ್ತುತ್ತದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಅವಿರತವಾಗಿ ನಡೆಯುತ್ತಿದೆ. ಕಳೆದ ಎರಡ್ಮೂರು ವರ್ಷಗಳಿಂದ ನಡೆಸುತ್ತಿದ್ದ ಕ್ರಿಕೆಟ್ ದಂದೆಯ ಜಾಲವನ್ನು ಪೋಲಿಸರು ಬ್ರೇಕ್ ಹಾಕಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಜಾಲದ ಪ್ರಮುಖ ಕಿಂಗ್ಪಿನ್ ಶಾಸಕ ಸಿಟಿ ರವಿ ಬಲಗೈ ಬಂಟ.
ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…ಹೌದು, ಆನ್ ಲೈನ್ ಮುಖಾಂತರ ಕ್ರಿಕೆಟ್ ದಂಧೆ. ಚಿಕ್ಕಮಗಳೂರು ನಗರಸಭಾ ಮಾಜಿ ಉಪಾಧ್ಯಕ್ಷ ಕಾಯಿ ರವಿ ಸೇರಿ ಆರು ಮಂದಿ ಪೋಲಿಸರು ವಶಕ್ಕೆ ಪಡೆದಿದ್ದು ಬ್ಯಾಂಕ್ ಚೆಕ್, ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಈ ಫೋಟೊದಲ್ಲಿರುವವನೆ ಈ ಸ್ಟೋರಿಯ ಹೀರೋ.ಹೆಸರು ರವಿಕುಮಾರ್ ಅಲಿಯಾಸ್ ಕಾಯಿ ರವಿ. ಹೇಳ್ಕೊಳೊಕ್ಕೆ ಚಿಕ್ಕಮಗಳೂರು ನಗರಸಭಾ ಮಾಜಿ ಉಪಾಧ್ಯಕ್ಷ ಅಷ್ಟೇ ಅಲ್ಲಾ ಬೆಟ್ಟಿಂಗ್ ದಂದೆ ಬಗ್ಗೆ ಉದ್ದುದ್ದೂ ಭಾಷಣ ಮಾಡೋ ಮಾಜಿ ಸಚಿವ ಸಿಟಿ ರವಿ ಬಲಗೈ ಬಂಟ ಬೇರೆ.
ಪ್ರಧಾನಿ ನರೇಂದ್ರೆ ಮೋದಿ ನೋಟ್ ಬ್ಯಾನ್ ನಿಷೇಧಿಸಿದ ಮೇಲೆ ದೇಶದಲ್ಲಿ ದುರ್ಬಿ ಹಾಕೊಂಡು ಹುಡುಕಿದ್ರು ಕ್ರಿಕೆಟ್ ಬೆಟ್ಟಿಂಗ್ ದಂದೆ ನಡೆಯುತ್ತಲೇ ಇಲ್ಲಾ ಅಂತ ಬೇರೆ ಹೇಳಿದ್ರು ಮಾಜಿ ಸಚಿವ ಸಿಟಿ ರವಿ ಸಾಹೆಬ್ರು. ಆದ್ರೇ ತನ್ನ ಬಲಗೈ ಬಂಟ ಕಾಯಿ ರವಿನೇ ಕ್ರಿಕೆಟ್ ಬೆಟ್ಟಿಂಗ್ ದಂದೆ ನಡೆಸುತ್ತಿರೋದು ತಿಳಿದಿಲ್ಲಾ ಅನ್ಸುತ್ತೆ. ಇತನ ವ್ಯವಹಾರ ಮುಂಬೈ, ದೆಹಲಿಯವರೆಗೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು ಇಂತಹ ಅಡ್ಡೆ ಮೇಲೆ ದಾಳಿ ಮಾಡಿರುವ ಚಿಕ್ಕಮಗಳುರು ಡಿಸಿಐಬಿ ಪೋಲಿಸರು ಬೆಟ್ಟಿಂಗ್ ಗೆ ಬಳಸುತ್ತಿದ್ದ ಟಿವಿ ,ಲ್ಯಾಪ್ಟಾಪ್, ಮೊಬೈಲ್ ಪೋನ್ ಹಾಗೂ ಲಕ್ಷಾಂತರ ರೂಪಾಯಿ ನಗದು ವಶ ಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಮನೆಯೊಂದರ ಮೇಲೆ ದಾಳಿ ನಡೆಸಿರುವ ಡಿಸಿಐಬಿ ಪೋಲಿಸರು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಕಾಯಿ ರವಿ, ಅಭಿ, ಪ್ರಶಾಂತ್, ವೆಂಕಟೇಶ್, ಅಪ್ಜಲ್ ಹಾಗು ಮೋಹನ್ ಬಂಧಿಸಿದ್ದಾರೆ. ವಿಷೇಶ ಅಂದ್ರೆ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಯಿ ರವಿ ಹೆಸರೂ ಕೂಡ ಕೇಳಿಬಂದಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಕೂಡ ನಡೆಸಿದ್ರು. ಈ ಬೆಟ್ಟಿಂಗ್ ದಂಧೆಯ ದೂರುದಾರ ಅರವಿಂದ್ ಕೂದುವಳ್ಳಿ ನೀಡಿರುವ ದೂರಿನ ಮೇಲೆ ಬಂಧಿಸಿದ್ದಾರೆ.
ಈಗಾಗಲೇ ಎಫ್ಐಆರ್ ದಾಖಲಾಗಿದ್ದು ಸೆಕ್ಷನ್ 66(ಡಿ),420,120(ಬಿ)ಎಪಿಸಿ,78(3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಿಕ್ಕಮಗಳೂರು ಮಾತ್ರವಲ್ಲದೆ ಹೊರಗಿನವರು ಸಹಾ ಇವರ ಬಳಿ ಬೆಟ್ಟಿಂಗ್ ನಲ್ಲಿ ವ್ಯವಸ್ಥಿತವಾಗಿ ದಂಧೆಯನ್ನು ನಡೆಸುತ್ತಿದ್ರು. ಇನ್ನು ಇಬ್ಬರೂ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಇವರ ಬಳಿ ಬೆಟ್ಟಿಂಗ್ ಕಟ್ಟುತ್ತಿದ್ದವರಲ್ಲಿ ಬಹುತೇಕರು ರಾಜಕಾರಿಗಳೂ ಅನ್ನೋ ವಿಷಯ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಅಂತ ಎಸ್ಪಿ ಅಣ್ಣಾಮಲೈ ಹೇಳಿದ್ರು.
ಒಟ್ಟಾರೆಯಾಗಿ ಸದ್ಯ ಪೋಲಿಸರು ಬೆಟ್ಟಿಂಗ್ ದಂಧೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾರೇ ಬೆಟ್ಟಿಂಗ್ ನಲ್ಲಿ ತೊಡಗಿದ್ರು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಗೆ ಬ್ರೇಕ್ ಹಾಕಲು ಪೋಲಿಸರು ಮುಂದಾಗಿದ್ದಾರೆ. ಆದ್ರೆ ಈ ದಂಧೆಯ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದ್ದು ಪೋಲಿಸರ ಕಪಿ ಮುಷ್ಠಿಗೆ ಸಿಲುಕುತ್ತಾರ ಅನ್ನೋದೆ ಎಲ್ಲರ ಸಂಶಯ…