ಕಾರ್ಕಳ: ಫೇಸ್ಬುಕ್ ಮೂಲಕ ಮಾಧ್ಯಮದ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಈ ಬಗ್ಗೆ ಸಮಗ್ರ ತನಿಖೆಯನ್ನು ಕೈಗೆತ್ತಿಕೊಂಡು ನ್ಯಾಯ ಒದಗಿಸುವಂತೆ ಕಾರ್ಕಳ ಪತ್ರಕರ್ತರು ಕಾರ್ಕಳ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಜೋಯ್ ಅಂತೋನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಾರ್ಕಳ ಬಿಜೆಪಿ ಮಹಿಳಾಮೋರ್ಚಾವು ಕಳೆದ ಜ.31ರಂದು ಬಿಜೆಪಿ ಕಛೇರಿಯಲ್ಲಿ ಎಂಎಸ್ಐಎಲ್ ಮದ್ಯದಂಗಡಿ ವಿರುದ್ದ ಕೈಗೆತ್ತಿಕೊಂಡ ಪ್ರತಿಭಟನೆಯ ಕುರಿತಂತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಪ್ರತಿನಿಧಿಗಳು ಸಮಾಜದಲ್ಲಿ ನಡೆಯುತ್ತಿರುವ ನೈಜಾ ಅಕ್ರಮ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿ, ಮಹಿಳಾ ಮೋರ್ಚಾದ ಪದಾಧಿಕಾರಿಗಳ ಗಮನ ಸೆಳೆದಿದ್ದರು. ಪತ್ರಿಕಾ ಗೋಷ್ಠಿಯಲ್ಲಿ ನಡೆದ ವಿದ್ಯಾಮಾನಗಳ ಕುರಿತ ನೈಜಾ ಘಟನಾಧಾರಿತ ಅಡಿಯೋವನ್ನು ಕೂಡಾ ಫೇಸ್ಬುಕ್ ಅಂತರ್ಜಾಲದಲ್ಲಿ ಬಿತ್ತರಿಸಿದ್ದರು. ಅದನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಹರೀಶ್ ಯಾನೆ ಕಿಚ್ಚ ಎಂಬಾತ ಬೆದರಿಕೆ ಹಾಕಿರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮಾಧ್ಯಮದ ಅಧಿಕಾರವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಗೂಂಡಾಗಿರಿ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿ, ತಪ್ಪಿದಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.