ಬಂಟ್ವಾಳ: ಕಾರ್ಯಕ್ರಮ ಮುಗಿಸಿಕೊಂಡು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದು ರಸ್ತೆ ಬದಿಯಲ್ಲಿದ್ದ ಮನೆಗೆ ಬೈಕ್ ಸಹಿತ ಸವಾರ ಅಪ್ಪಳಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವಿಟ್ಲದ ಕಲ್ಲಕಟ್ಟ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕರೆಂಕಿ ನಿವಾಸಿ ಪುಷ್ಪರಾಜ್ (20) ಮೃತಪಟ್ಟವರು.
ಇವರು ವಿಟ್ಲ ಕಸಬಾ ಗ್ರಾಮದ ಮನೆಯೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಸುಮಾರು 2 ಗಂಟೆಗೆ ಸುಮಾರಿಗೆ ಪುತ್ತೂರು ರಸ್ತೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಕಟ್ಟ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ಕಳೆದು ಮನೆಯೊಂದರ ಮೇಲೆ ಬೈಕ್ ಸಹಿತ ಅಪ್ಪಳಿಸಿದ್ದಾರೆ. ಮನೆಯ ಕಿಟಕಿಯ ಸ್ಲ್ಯಾಬ್ ಅವರ ತಲೆಗೆ ಬಡಿದಿದ್ದು, ಮಹಡಿಗೆ ತೆರಳುವ ಮೆಟ್ಟಿಲಿನಿಂದ ಕೆಳಗಡೆವರೆಗೆ ಉರುಳಿಕೊಂಡು ಬಂದು ಬಿದ್ದಿದ್ದಾರೆ. ಶಬ್ಧ ಕೇಳಿಸಿದಾಗ ಎಚ್ಚರಗೊಂಡ ಮನೆಯವರು ಗಂಭೀರ ಗಾಯಗೊಂಡ ಪುಷ್ಪರಾಜ್ ಅವರಿಗೆ ನೀರು ಕುಡಿಸಲು ಯತ್ನಿಸಿದ್ದರೂ ಅಷ್ಟೋತ್ತಿಗೆ ಕೊನೆಯುಸಿರು ಎಳೆದಿದ್ದಾರೆ. ಬಳಿಕ ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ವಿಚ್ ಆಫ್ ಬಂದಿದ್ದರಿಂದ ಗಾಬರಿಗೊಂಡ ಅವರು ಆತನನ್ನು ಹುಡುಕಿಕೊಂಡು ಬಂದಾಗ ವಿಷಯ ತಿಳಿದಿದೆ. ಘಟನಾ ಸ್ಥಳಕ್ಕೆ ವಿಟ್ಲ ಎಸೈ ನಾಗರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.