ಕಾಸರಗೋಡು: ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಮವ್ವಾರ್ ನಲ್ಲಿ ನಡೆದಿದೆ.
ಮವ್ವಾರ್ ಪಣಿಯೆಯ ಗೋಪಾಲ್ ಮಣಿಯಾಣಿಯವರ ಪುತ್ರಿ ಶ್ರೀಜಾ (18) ಆತ್ಮಹತ್ಯೆ ಮಾಡಿಕೊಂಡವರು.
ಶ್ರೀಜಾರ ತಾಯಿ ಮತ್ತು ಸಹೋದರಿ ಕಾಸರಗೋಡಿಗೆ ತೆರಳಿದ್ದು ಮರಳಿ ಬಂದಾಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈಕೆ ಮಾಯಿಪ್ಪಾಡಿ ಡಯೆಟ್ ನ ಶಿಕ್ಷಕ ತರಬೇತಿ ವಿದ್ಯಾರ್ಥಿನಿ ಯಾಗಿದ್ದಳು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.