News Kannada
Tuesday, February 07 2023

ಕರಾವಳಿ

ಎಲ್ಲಾ ಸಮಾಜದವರೊಂದಿಗೆ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ: ಲಕ್ಷ್ಮೀನಾರಾಯಣ ಆಳ್ವ

Photo Credit :

ಎಲ್ಲಾ ಸಮಾಜದವರೊಂದಿಗೆ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ: ಲಕ್ಷ್ಮೀನಾರಾಯಣ ಆಳ್ವ

ಬಂಟ್ವಾಳ: ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ. ನಾವೆಷ್ಟು ಬೆಳೆದರೂ ಪ್ರೀತಿ, ವಿಶ್ವಾಸ, ವಿವೇಕದಿಂದ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ.

ಬಂಟ್ವಾಳದ ಬಂಟರಭವನದಲ್ಲಿ ಮಂಗಳವಾರ ನಡೆದ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಮೂರನೇ ವರ್ಷದ ಬಂಟ ಸಮಾಗಮ 2017 ಸಮಾರೋಪ ಸಮಾರಂಭದಲ್ಲಿ ಸದಾಶಯ ತ್ರೈಮಾಸಿಕ ವಿಶೇಷಾಂಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಯಾವುದೇ ಸಂಘಟನೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಹಾರಾಷ್ಟ್ರದಲ್ಲಿ ಬಂಟರು ತಮ್ಮ ತಾಕತನ್ನು ತೋರಿಸಿದ್ದಾರೆ. ಬಂಟರು ಶಿಕ್ಷಣಕ್ಕೆ ಸಂಸ್ಥೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದ ಅವರು ಬಂಟರು ಯಾವತ್ತೂ ಅಹಂಕಾರ ಪಡದೇ ಇತರ ಸಮುದಾಯಕ್ಕೂ ತಮ್ಮ ಕೈಲಾದಷ್ಟು ಸಹಾಯ ಹಸ್ತವನ್ನು ನೀಡುವುದರೊಂದಿಗೆ ಸಂಘದ ಉದ್ದೇಶಗಳು ಈಡೇರಲಿ ಎಂದು ಆಶಿಸಿದರು.

ಬಂಟ ಎಂದರೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ. ಇರುವ ವ್ಯಕ್ತಿಯೇ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಸದಾನಂದ ಶೆಟ್ಟಿಯವರ ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ ಅಭಿನಂದನೀಯ ಎಂದ ಪುತ್ತೂರು ಶಾಸಕ ಶಕುಂತಳಾ ಶೆಟ್ಟಿ ಜಿಲ್ಲೆಯ ಜಾನಪದ ಕ್ರೀಡೆ ಕಂಬಳ ಹಾಗೂ ನೇತ್ರಾವತಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಸ್ವರವು ಒಂದಾಗಬೇಕು. ತನ್ಮೂಲಕವಾಗಿ ಈ ಎರಡನ್ನೂ ಶಾಶ್ವತವಾಗಿ ಉಳಿಸುವ ಕೆಲಸ ಆಗಬೇಕೆಂದರು.

ವೇದಿಕೆಯಲ್ಲಿ ಉದ್ಯಮಿಗಳಾದ ಡಾ.ಎ.ಜೆ. ಶೆಟ್ಟಿ, ಡಾ| ಭಾಸ್ಕರ ಶೆಟ್ಟಿ, ಡಾ| ಸರ್ವೋತ್ತಮ ಶೆಟ್ಟಿ ಅಬುದಾಬಿ, ಪಾದೆ ಅಜಿತ್ ರೈ, ವಿಜಯನಾಥ ವಿಠಲ ಶೆಟ್ಟಿ, ಸುರೇಶ್ ಶೆಟ್ಟಿ, ನಗ್ರಿ ರೋಹಿತ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎಲ್. ಪ್ರಭಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಅದಾನಿ ಯುಪಿಸಿಎಲ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮುಂಬೈ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎ. ಶಂಕರ ಶೆಟ್ಟಿ, ಐಕಳ ಹರೀಶ್ ಶಟ್ಟಿ,ವಿಶ್ವನಾಥ ಶೆಟ್ಟಿ, ರಶ್ಮಿ ಶಿಕ್ಷಣ ಸಂಸ್ಥೆಯ ಸವಣೂರು ಸೀತಾರಾಮ ರೈ, ಸುಳ್ಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಮುಂಬೈ ಬಂಟರ ಯಾನೆ ನಾಡವರ ಸಂಘದ ಖಜಾಂಚಿ ಸತೀಶ್ ಶೆಟ್ಟಿ, ಪ್ರಮೋದ್ ರೈ ಕೆದಂಬಾಡಿ, ಸದಾನಂದ ಶೆಟ್ಟಿ ರಂಗೋಲಿ ಬಿ.ಸಿ.ರೋಡು, ಅಭಿನಂದನ್ ಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಂಜುನಾಥ ಭಂಡಾರಿ, ನೇಮಿರಾಜ ರೈ ಬೋಳಂತೂರು, ನ್ಯಾಯವಾದಿ ಸೀತಾರಾಮ ಶೆಟ್ಟಿ, ದೇವಾನಂದ ಶೆಟ್ಟಿ ದಿಕ್ಸಿ, ಶಾಂತರಾಮ ಶೆಟ್ಟಿ ದಂಪತಿ, ಸಂತೋಷ್ ಶೆಟ್ಟಿ ಮೂಲ್ಕಿ, ಜಯಕರ ಆಳ್ವ ದಂಪತಿ, ಗೀತಾಭಾಸ್ಕರ ಶೆಟ್ಟಿ, ಸುಧಾಕರ ಶೆಟ್ಟಿ ಬಾರಕೂರು, ಪಟ್ಲ ಸತೀಶ್ ಶೆಟ್ಟಿ, ಕಿರಣ್ ಹೆಗ್ಡೆ, ತೋನ್ಸೆ ಮನೋಹರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

See also  ಮೂಡುಬಿದಿರೆ ಮೂಡಾ ಅಧ್ಯಕ್ಷ, ಸದಸ್ಯರ ಪದಗ್ರಹಣ

ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸದಾನಂದ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಎಲ್ಲಾ ಸಮುದಾಯಕ್ಕೂ ಇಂಟರ್ ನ್ಯಾಷನಲ್ ಟ್ರಸ್ಟ್ ನ ಮೂಲಕ ಸಹಾಯವನ್ನು ಮಾಡಲಾಗುವುದು. ಮುಂದಿನ ದಿನದಲ್ಲೂ ಅನೇಕ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮೈನಾ ಸದಾನಂದ ಶೆಟ್ಟಿರವರು ವೇದಿಕೆಯಲ್ಲಿದ್ದರು.

ಸಮಾಗಮಕ್ಕೆ ಚಾಲನೆ: ಬೆಳಗ್ಗೆ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ತೃತೀಯ ವರ್ಷದ ಬಂಟ ಸಮಾಗಮ 2017ರ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಮತ್ತು ಮೈನಾ ಶೆಟ್ಟಿ ದಂಪತಿಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಬೋಳಂತೂರು ಗುತ್ತು ಗಂಗಾಧರ ರೈ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳು ನೆರೆದ ಜನರನ್ನು ಮನರಂಜಿಸಿತು. ಈ ಸಂದರ್ಭದಲ್ಲಿ ಮಿಸ್ಟರ್ ಬಂಟ್, ಮಿಸ್ಬಂಟ್, ಬಂಟ್ಸ್ ಕಪಲ್ ಸ್ಪರ್ಧೆ ನಡೆಯಿತು.

ಭೂತಾಳ ಪಾಂಡ್ಯ ವೈಭವ ತುಳು ರೂಪಕ, ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದೊಂದಿಗೆ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶಿಸಿದ ಡಾ. ವರ್ಷಾ ಶೆಟ್ಟಿ ಮತ್ತು ಕು. ದೀಶಾ ಶೆಟ್ಟಿ ಅಭಿನಯದ ನೇನಪಾದಳಾ ಶಕುಂತಳಾ ಯಕ್ಷ ನಾಟ್ಯ ಪ್ರದರ್ಶನ ನಡೆಯಿತು. ಇದೇ ವೇಳೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕೊನೆಗೆ ಹಾಸ್ಯಲಹರಿ, ನೃತ್ಯ ಸಂಗೀತಗಳ ಸಿಂಚನ, ಬಂಟ ಪ್ರತಿಭೆಗಳ ಪ್ರದರ್ಶನ ನಡೆಯಿತು. ಸದಾಶಯ ಸಂಪಾದಕರಾದ ಕದ್ರಿ ನವನೀತ್ ಶೆಟ್ಟಿ, ತೀರ್ಥಳ್ಳಿ ವಿಶ್ವನಾಥ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಪ್ರಾಸ್ತಾವನಗೈದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು