ಮಂಗಳೂರು: ಹ್ಯೂಂಡೈ ನ್ಯೂ 2017 ಗ್ರಾಂಡ್ ಐ10” ಕಾರನ್ನು ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಟಿ ಅನ್ವಿತ ಸಾಗರ್ ಅವರು ಬಿಡುಗಡೆಗೊಳಿಸಿದರು. ಹ್ಯೂಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಅಧಿಕೃತ ಡೀಲರ್ ಹಾಗೂ 17 ಅತ್ಯಾಧುನಿಕ ಶೋರೂಂ ಮತ್ತು 24 ಸರ್ವೀಸ್ ಸೆಂಟರ್ ಗಳನ್ನು ಹೊಂದಿರುವ ಕರ್ನಾಟಕದ ಅತೀ ದೊಡ್ಡ ಹ್ಯೂಂಡೈನ ಅಧಿಕೃತ ಡೀಲರ್ ಆಗಿರುವ ನಗರದ ಕುಂಟಿಕಾನದಲ್ಲಿರುವ ಅದ್ವೈತ ಹ್ಯೂಂಡೈ ಕಾರ್ ಶೋರೋಂ ನಲ್ಲಿ “ನ್ಯೂ 2017 ಗ್ರಾಂಡ್ ಐ 10 ಕಾರಿನ ಕೀಯನ್ನು ಪ್ರಥಮ ಗ್ರಾಹಕರುಗಳಾದ ಅಕ್ಷತಾ, ವಿವೇಕ್ ರಾಜ್, ಇಲ್ ರೋಯ್ ಡೆನ್ನಿಸ್, ರಿಯಾಜ್ ಎಹಮದ್ ರಿಗೆ ಹಸ್ತಾಂತರಿಸಲಾಯಿತು.
ಪ್ರಥಮ ಬಾರಿಗೆ ಸೆ.13ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹ್ಯೂಂಡೈ ಗ್ರಾಂಡ್ ಐ10 ಘನತೆಯ ‘ಇಂಡಿಯನ್ ಕಾರ್ ಆಫ್ ದಿ ಇಯರ್ 2014’ ಪ್ರಶಸ್ತಿ ಪುರಸ್ಕಾರವನ್ನು ಯಶಸ್ವಿಯಾಗಿ ತನ್ನ ಮುಡಿಗೇರಿಸಿಕೊಂಡು ಗ್ರಾಹಕ ಮನಗೆದ್ದು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಲ್ಲಿಂದ ಮುಂದುವರಿದು ಇದೀಗ ಹ್ಯೂಂಡೈ ಮಾರುಕಟ್ಟೆಗೆ ಪ್ರಸ್ತುತ ಪಡಿಸುತ್ತಿರುವ “ನ್ಯೂ 2017 ಗ್ರಾಂಡ್ ಐ10” ವಿವಿಧ ಶ್ರೇಣಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಕಾರುಗಳಿಗೆ ಪ್ರಾರಂಭಿಕ ಬೆಲೆ ರೂ.4.67 ಲಕ್ಷ ಹಾಗೂ ಡಿಸೇಲ್ ಕಾರುಗಳಿಗೆ ರೂ.5.79 ಲಕ್ಷ ದಲ್ಲಿ ದೊರೆಯಲಿದೆ.
ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ “ನ್ಯೂ 2017 ಗ್ರಾಂಡ್ ಐ10” ಪೆಟ್ರೋಲ್ ನಲ್ಲಿ 1.2 ಲೀ ಇಂಜಿನ್ 83 ಪಿಎಸ್ ಸಾಮರ್ಥ್ಯ ಹಾಗೂ ಡೀಸೆಲ್ ನಲ್ಲಿ 1.2 ಲೀ ಇಂಜಿನ್ 75 ಪಿಎಸ್ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಇಂಜಿನ್ 19.77 ಪ್ರತಿ ಲೀಟರ್, ಡಿಸೇಲ್ ಇಂಜಿನ್ 24.95 ಪ್ರತೀ ಲೀಟರ್ ಹಾಗೂ ಪೆಟ್ರೋಲ್ ಆಟೋ 17.49 ಪ್ರತೀ ಲೀಟರ್ ಎಆರ್ ಎಐ ಇಂಧನ ಕ್ಷಮತೆ ಹೊಂದಿದೆ.
ನ್ಯೂ 2017 ಗ್ರಾಂಡ್ ಐ10 ನಲ್ಲಿ ಡೇ ಟೈಮ್ ರನ್ನಿಂಗ್ ಲೈಟ್, ಎರ್ ಕರ್ನ್ ಸೆಫ್ಟಿ ಟಯರ್ ವಿಂಡೋ, ಪುಲ್ಲೀ ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್ ಎಸಿ, ವಾಯಿಸ್ ರೆಕಗ್ ನಿಶನ್, 7 ಟಚ್ ಸ್ಕ್ರೀನ್, ರಿವರ್ಸ್ ಕ್ಯಾಮರಾ, ಎವಿ ವಿದ್ ಸ್ಮಾರ್ಟ್ ಫೋನ್ ಕನೆಕ್ಷನ್, ಏಪಲ್ ಕಾರ್ ಪ್ಲೇ, ಮಿರರ್ ಲಿಂಕ್ ಫಂಗ್ ಕ್ಷನಾಲಿಟಿ ಮುಂತಾದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಾಪ್ರಬಂಧಕ ಮೆಲ್ವಿನ್ ಫೆರ್ನಾಂಡಿಸ್, ಸೇಲ್ಸ್ ಮೆನೇಜರ್ ಶಿವ ಪ್ರಸಾದ್, ಎಕೌಂಟ್ಸ್ ಮೆನೇಜರ್ ಸುಧಾಕರ್, ಸರ್ವೀಸ್ ಮನೇಜರ್ ಶಶಿಕಾಂತ್ ಶೆಟ್ಟಿ ಹಾಘೂ ಶೋರೂಂ ಮೆನೇಜರ್ ರಾಜೇಶ್ ಉಳ್ಳಾಲ್ ಉಪಸ್ಥಿತರಿದ್ದರು.