ಬೆಳ್ತಂಗಡಿ: ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಮುನ್ನಡೆದರೆ ಯಾವುದೇ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿಸಬಹುದು. ಅಳದಂಗಡಿ ಅರಮನೆ ನಗರಿಯಲ್ಲಿ ಧಾರ್ಮಿಕ ಚಿಂತನೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ರಾಜ್ಯದಲ್ಲಿ ಗುರುತಿಸುವಂತಾಗಿದೆ ಎಂದು ಸುವರ್ಣ ನ್ಯೂಸ್ ಚಾನೆಲ್ ಇದರ ವಾರ್ತಾ ನಿರೂಪಕಿ ನವಿತಾ ಜೈನ್ ಅವರು ಹೇಳಿದರು.
ಅವರು ಅಳದಂಗಡಿ ಅರಮನೆ ನಗರಿಯ ಸತ್ಯದೇವತಾ ಕ್ರೀಡಾಂಗಣದಲ್ಲಿ ಆಮಂತ್ರಣ ಪರಿವಾರ ಇದರ ಆಮಂತ್ರಣ ಹಬ್ಬ 2017 ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾನಾಡುತ್ತಿದ್ದರು.
ಸಮಾರಂಭದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಲ. ಪ್ರವೀಣ ಇಂದ್ರ, ಬಿಜೆಪಿ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಅಮೃತಪ್ರಕಾಶ ಇದರ ಪ್ರಧಾನ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಅಳದಂಗಡಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ನಾರಾವಿ ಜಿ.ಪಂ.ಸದಸ್ಯ ಧರಣೇಂದ್ರ ಕುಮಾರ್, ಅಳದಂಗಡಿ ತಾ.ಪಂ ಸದಸ್ಯೆ ವಿನುಷಾ ಪ್ರಕಾಶ್, ಅಂಡಿಂಜೆ ತಾ.ಪಂ ಸದಸ್ಯ ಸುಧೀರ್ ಸುವರ್ಣ, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು, ಡೈಮಂಡ್ ಎಕ್ಸಿಕ್ಯೂಟಿವ್ ಸೂಪರ್ ರೋಯಲ್ ಹಾಲಿಡೇ ಇಂಡಿಯಾ ಇದರ ಗಿರೀಶ್ ಎಂ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ, ಮಂಗ್ಳೂರು ಹುಡುಗಿ ಹುಬ್ಳಿ ಹುಡುಗ ಧಾರಾವಾಹಿ ನಾಯಕಿ ರಾಧಿಕಾ ರಾವ್, ದಬಕ್ ದಬಾ ಐಸಾ ಚಿತ್ರದ ನಾಯಕಿ ಶೀತಲ್ ನಾಯಕ್, ಬಣ್ಣ ಬಣ್ಣದ ಬದುಕು ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಡ್ಯಾನ್ಸರ್ ತೌಷೀರ್ ಉಪಸ್ಥಿತರಿದ್ದು, ಆಚರಣಾ ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ರಾವ್, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್, ವೀರಕೇಸರಿ ಉಜಿರೆಯ ಪವನ್ ಪ್ರಭು ಮತ್ತು ಸತೀಶ್ ಶೆಟ್ಟಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರದ ಅಧ್ಯಕ್ಷ ರಮೇಶ್, ಬೆಳ್ತಂಗಡಿ ವಿರಾಂಜನೆಯ ಸೇವಾಸಮಿತಿಯ ಅಕ್ಷಯ್, ಇಂಚರ ಫ್ರೆಂಡ್ಸ್ ಪಿಲ್ಯ ಇದರ ಯೋಗಿಶ್ ಪೂಜಾರಿ, ನಮ ಮಾತೆರ್ಲಾ ಒಂಜೇ ತಂಡದ ರಮೇಶ್ ಸುವರ್ಣ, ಅಳದಂಗಡಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಸತ್ಯದೇವತೆ ಕಲಾ ತಂಡದ ಕೃಷ್ಣಪ್ಪ ಪೂಜಾರಿ, ಜೈನ್ ಪ್ರೆಂಡ್ಸ್ ಪದಾಧಿಕಾರಿಗಳು ಹಾಗೂ ಶೇಖರ ಬೆಳಾಲ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ನಾವರ ಗುತ್ತು ರವಿರಾಜ ಹೆಗ್ಡೆ, ಉದ್ಯಮಿ ಸೋಮನಾಥ ಬಂಗೇರ, ಡಾ. ಶಶಿಧರ ಡೋಂಗ್ರೆ, ಅಕ್ಷಯ ರಾಜ್ ಮಂಗಳೂರು, ಡಾ. ದಿಶಾ ಅಜಿಲ, ಡಾ. ಸುಷ್ಮಾ ಡೋಂಗ್ರೆ, ಶೃತಿ ರಾವ್ ಪುತ್ತೂರು, ಸುಷ್ಮಾ ರಾಜ್ ಮಂಗಳೂರು, ಅಕ್ಷತಾ ಕಾರ್ನಾಡ್, ರಕ್ಷಿತಾ ಹೆಮಂತ್ ಪುತ್ತೂರು, ರಂಜು ಮಂಜೇಶ್ವರ, ಸೌಮ್ಯ ರವಿ ದಾವಣಗೆರೆ, ಪೂಜಾ ಸಾಗರ, ಹೇಮಂತ ಸುವರ್ಣ, ಸ್ವಾತೀ ಕೃಷ್ಣ ಆಚಾರ್ಯ, ವಿಜೆ ರಕ್ಷಿತಾ ಶೆಟ್ಟಿ, ಪೂವಿ.ಕೆ.ರಾವ್, ರಂಜು ಕಕ್ಕಿಂಜೆ ಹಾಗೂ ಹಲವಾರು ಪ್ರಮುಖರು, ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ನಟ ನಟಿಯರು ಭಾಗವಹಿಸಿದ್ದರು.
ಅಕ್ಷತಾ ಪ್ರಾರ್ಥನೆ ಹಾಡಿದರು, ಸಮಿತಿಯ ಕಾರ್ಯಧ್ಯಕ್ಷ ಪಿ.ಹೆಚ್.ಪ್ರಕಾಶ ಶೆಟ್ಟಿ ಸ್ವಾಗತಿಸಿದರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ವಿಜೆ ಪ್ರೀತಮ್ ಜೈನ್ ಮತ್ತು ವಿಜೆ ಚೈತ್ರಾ ಅಂಚನ್ ನಿರ್ವಹಿಸಿದರು. ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಸದಾನಂದ ಪೂಜಾರಿ ಉಂಗಿಬೈಲು ಧನ್ಯವಾದ ಸಲ್ಲಿಸಿದರು.