ಉಳ್ಳಾಲ: ಉಪ್ಪಳದ ಕುಖ್ಯಾತ ರೌಡಿ ಹಲವು ಪ್ರಕರಣಗಳ ಆರೋಪಿ ಖಾಲಿಯಾ ರಫೀಕ್ ನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಎದುರುಗಡೆ ದುಷ್ಕರ್ಮಿಗಳು ಅಪಘಾತವೆಸಗಿ ಗುಂಡಿಕ್ಕಿ ಬಳಿಕ ತಲವಾರಿನಿಂದ ಕಡಿದು ಹತ್ಯೆ ನಡೆಸಿದ್ದಾರೆ. ಈ ಮೂಲಕ 2013ರಲ್ಲಿ ಖಾಲಿಯಾನಿಂದ ಹತ್ಯೆಗೀಡಾಗಿದ್ದ ಮುತಾಲಿಬ್ ಸಹೋದರರು ಸೇಡು ತೀರಿಸಿಕೊಂಡಿದ್ದಾರೆಂಬ ಮಾಹಿತಿ ಮಂಜೇಶ್ವರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ತಡರಾತ್ರಿ 11.30ರ ವೇಳೆ ಖಾಲಿಯಾ ರಫೀಕ್, ಝಾಹಿರ್ ಮತ್ತು ಇನ್ನಿಬ್ಬರು ಗೆಳೆಯರು ಉಪ್ಪಳದಿಂದ ಮಂಗಳೂರಿಗೆ ರಿಟ್ಝ್ ಕಾರಿನಲ್ಲಿ ತೆರಳುತ್ತಿದ್ದರು. ಇವರನ್ನು ದುಷ್ಕರ್ಮಿಗಳ ಇಬ್ಬರ ತಂಡ ಸ್ವಿಫ್ಟ್ ಕಾರಿನಲ್ಲಿ ಫಾಲೋ ಮಾಡುತಿತ್ತು. ಖಾಲಿಯಾ ರಫೀಕನ ಕಾರು ಕೋಟೆಕಾರು ಪೆಟ್ರೋಲ್ ಪಂಪ್ ತಲುಪುತ್ತಿದ್ದಂತೆ, ದುಷ್ಕರ್ಮಿಗಳು ಹಿಂದೆಯೇ ನಿಗದಿಪಡಿಸಿದ್ದ ಲಾರಿಯೊಂದು ವಿರುದ್ಧ ಧಿಕ್ಕಿನಲ್ಲಿ ಬಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಷ್ಟರಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಖಾಲಿಯಾ ರಫೀಕ್ ಮೇಲೆ ಗುಂಡು ಹಾರಿಸಿದ್ದಾರೆ. ಅದನ್ನು ತಡೆಯಲು ಬಂದ ಝಾಹಿರ್ ಎಂಬಾತನಿಗೆ ತಲವಾರಿನಿಂದ ಕಡಿದಿದ್ದಾರೆ. ಗುಂಡೇಟು ತಗಲಿದರೂ ಖಾಲಿಯಾ ಪೆಟ್ರೋಲ್ ಪಂಪ್ ಒಳಗಿನಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಮತ್ತೆ ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ.
2013ರ ಅ.25 ರಂದು ಖಾಲಿಯ ರಫೀಕ್ ನ ತಂಡದಿಂದ ಬೇರ್ಪಟ್ಟಿದ್ದ ಮುತಾಲಿಬ್ ಎಂಬಾತನನ್ನು ಖಾಲಿಯಾ ಸೇರಿದಂತೆ ತಂಡ ಹತ್ಯೆ ನಡೆಸಿತ್ತು. ಆ ಬಳಿಕ