ಉಳ್ಳಾಲ: ಉಳ್ಳಾಲ ನಗರಸಭೆಯ ಅನರ್ಹಗೊಂಡ ಎರಡು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ 24ನೇ ಚೆಂಬುಗುಡ್ಡೆ ವಾರ್ಡ್ ನಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಭಾಝಿಲ್ ಡಿ.ಸೋಜ ಮತ್ತು 26ನೇ ಕಲ್ಲಾಪು ವಾರ್ಡ್ ನಿಂದ ಕಾಂಗ್ರೆಸ್ ನ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಗೆಲುವು ಸಾಧಿಸಿದ್ದು, ಉಳ್ಳಾಲ ನಗರಸಭೆಯ ಈ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಂತಾಗಿದೆ.
ಚೆಂಬುಗುಡ್ಡೆಯ 24ನೇ ವಾರ್ಡ್ ನಲ್ಲಿ ಬಾಝಿಲ್ ಡಿ.ಸೋಜ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಚೆಂಬುಗುಡ್ಡೆ ಅವರೆದುರು ಮತಗಳ ಅಂತರದಿಂದ ಜಯಶಾಲಿಯಾದರೆ, 26ನೇ ಕಲ್ಲಾಪು ವಾರ್ಡ್ ನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ತನ್ನ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ ಅವರೆದುರು ಮತಗಳ ಅಂತರದಿಂದ ವಿಜಯಿಯಾದರು.
ಉಳ್ಳಾಲ ಪುರಸಭೆಯಾಗಿದ್ದ ಉಳ್ಳಾಲಕ್ಕೆ 2013ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಪಡೆಯುವ ಮೂಲಕ ಆಡಳಿತಕ್ಕೇರಿದರೆ ಬಿಜೆಪಿ 7 ಸ್ಥಾನಗಳನ್ನು, ಪಕ್ಷೇತರ 2, ಎಸ್ಡಿಪಿಐ ಒಂದು ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್ನ 24ನೇ ಚೆಂಬುಗುಡ್ಡೆ ವಾರ್ಡ್ ನ ಸದಸ್ಯ ಬಾಝಿಲ್ ಡಿ.ಸೋಜ ಮತ್ತು 26ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ಉಸ್ಮಾನ್ ಕಲ್ಲಾಪು ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿದಾವಿತ್ನಲ್ಲಿ ಕ್ರಿಮಿನಲ್ ಮೊಕದ್ದಮೆ ವಿವರ ನೀಡಿಲ್ಲ. ಈ ನಿಟ್ಟಿನಲ್ಲಿ ಸದಸ್ಯತ್ವ ಅನರ್ಹಗೊಳಿಸುವಂತೆ ಪುರಸಭೆಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅನಿಲ್ ದಾಸ್ ಮತ್ತು ದಿನಕರ ಉಳ್ಳಾಲ್ ಕೋರ್ಟ್ ನ ಮೊರೆ ಹೋಗಿದ್ದರು. ಕೋರ್ಟ್ ನ ಆದೇಶದಂತೆ 2015ರಲ್ಲಿ ಈ ಇಬ್ಬರು ಸದಸ್ಯರನ್ನು ಅನರ್ಹಗೊಳಿಸಿದ್ದು, 2016ರಲ್ಲಿ ಚುನಾವಾಣೆ ನಡೆಸುವಂತೆ ಕೋರ್ಟ್ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಫೆ.12ರಂದು ಚುನಾವಣೆ ನಡೆದು ಅನರ್ಹಗೊಂಡಿದ್ದ ಸದಸ್ಯರಾದ ಬಾಝಿಲ್ ಡಿ.ಸೋಜ ಮತ್ತು ಉಸ್ಮಾನ್ ಕಲ್ಲಾಪು ಕಾಂಗ್ರೆಸ್ ನಿಂದ ಸ್ರ್ಪಸಿ ವಿಜಯಿಯಾಗಿದ್ದಾರೆ.
ಫಲಿತಾಂಶ ವಿವರ
24ನೇ ವಾರ್ಡ್ ಚೆಂಬುಗುಡ್ಡೆ ವಾರ್ಡ್
ಒಟ್ಟು ಚಲಾಚಣೆಗೊಂಡ ಮತಗಳು :
ಭಾಝಿಲ್ ಡಿ.ಸೋಜ (ಕಾಂಗ್ರೆಸ್ ) : 600
ಸತೀಶ್ ಚೆಂಬುಗುಡ್ಡೆ ( ಬಿಜೆಪಿ) : 149
ಹರೀಶ್ ಶೆಟ್ಟಿ (ಸಿಪಿಐಎಂ) : 78
ಖಲಂದರ್ (ಪಕ್ಷೇತರ ) : 57
26ನೇ ಕಲ್ಲಾಪು ವಾರ್ಡ್
ಒಟ್ಟು ಚಲಾಯಿತ ಮತಗಳು
ಉಸ್ಮಾನ್ ಕಲ್ಲಾಪು (ಕಾಂಗ್ರೆಸ್) : 510
ದಿನಕರ ಉಳ್ಳಾಲ್ (ಪಕ್ಷೇತರ : 240
ಚಂದ್ರಹಾಸ್ ಪಂಡಿತ್ಹೌಸ್ (ಬಿಜೆಪಿ) : 226
ಇಸ್ಮಾಯಿಲ್ ಶಾಫಿ (ಜೆಡಿಎಸ್) : 29