News Kannada
Sunday, January 29 2023

ಕರಾವಳಿ

ಆಕಸ್ಮಿಕವಾಗಿ ಮನೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

Photo Credit :

ಆಕಸ್ಮಿಕವಾಗಿ ಮನೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಬೆಳ್ತಂಗಡಿ: ಅಳದಂಗಡಿ ಸನಿಹದ ಒಬ್ಬೆದೊಟ್ಟು ಎಂಬಲ್ಲಿನ ವಾರಿಜಾ ಆಚಾರ್ತಿ ಎಂಬುವರ ಮನೆಗೆ ಮಂಗಳವಾರ ತಡ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ  ಮನೆ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.

ವಾರಿಜಾ (75) ಎಂಬುವರು ಒಬ್ಬರೆ ವಾಸಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕಟ್ಟಿಗೆಯೆಲ್ಲಾ ಭಸ್ಮವಾಗಿದೆ. ಸನಿಹದಲ್ಲಿದ್ದ ಫೈಬರ್ ನೀರಿನ ತೊಟ್ಟಿ ಕರಗಿಹೋಗಿದೆ. ಬಳಿಕ ಬೆಂಕಿ ಮನೆಗೂ ವ್ಯಾಪಿಸಿ ಹಂಚಿನ ಮನೆ ಅರ್ಧ ಸುಟ್ಟು ಬೂದಿಯಾಗಿದೆ.

ಅಗ್ನಿಯ ಅವತಾರ ಕಂಡು ಸನಿಹದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ದಳದ ಸಿಬ್ಬಂದಿಗಳು ಬಂದು ಮನೆಯ ಇನ್ನುಳಿದ ಭಾಗ ಸುಟ್ಟುಹೋಗುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದ ವಾರಿಜಾ ಅವರು ಮುಂಜಾನೆ ಆಗಮಿಸಿದ್ದಾರೆ. ಅವರು ವಿದ್ಯುತ್ ಹಾಗು ಅಡುಗೆ ಅನಿಲದ ಸಂಪರ್ಕವನ್ನು ತೆಗೆದು ಹೋಗಿದ್ದರು. ಹೀಗಾಗಿ ಮನೆಗೆ ಬೆಂಕಿ ಹೇಗೆ ತಗುಲಿತು ಎನ್ನುವುದು ನಿಗೂಢವಾಗಿದೆ. ಬೆಳ್ತಂಗಡಿ ತಹಸೀಲ್ದಾರ್, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
 

See also  ಒಂದೇ ಮನೆಯಲ್ಲಿದ್ದ ಮೂವರ ಮೇಲೆ ಹಲ್ಲೆ: ಅಜ್ಜ, ಮೊಮ್ಮಗಳು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು